ಬಸವನಾಡಿನಿಂದ ಜಾರ್ಖಂಡ್‌ವರೆಗೆ: ಬಾಬಾನಗರ ರೈತನ ಮಾವಿನ ಸುವಾಸನೆ
ಬಬಲೇಶ್ವರ ಮತಕ್ಷೇತ್ರದ ಬಾಬಾನಗರ ಗ್ರಾಮದ ಪ್ರಗತಿಪರ ರೈತರಾದ ಶ್ರೀ ಮುರಿಗೆಪ್ಪ ಬಸಪ್ಪ ಡೆಂಗಿನವರ ಹಾಗೂ ಸಂಗಡಿಗರು ಮಂಗಳವಾರ ನಮ್ಮ ವಿಜಯಪುರ ನಿವಾಸಕ್ಕೆ ಆಗಮಿಸಿದರು.
ತಮ್ಮ ತೋಟದಲ್ಲಿ 500 ಕೇಸರ್ ಮಾವಿನ ಗಿಡಗಳನ್ನು ನೆಟ್ಟು, ಯಶಸ್ವಿಯಾಗಿ ಮಾವಿನ ಬೆಳೆ ಬೆಳೆಸುತ್ತಿರುವುದಾಗಿ ತಿಳಿಸಿದರು. ಕೆ.ಜಿ.ಗೆ ರೂ.150ರಂತೆ ಮಾರಾಟ ಮಾಡಿ 4ರಿಂದ 4.5 ಲಕ್ಷ ರೂಪಾಯಿಗಳ ಆದಾಯ ನಿರೀಕ್ಷೆಯಲ್ಲಿರುವುದಾಗಿ ಹೇಳಿದರು. ದೂರದ ಜಾರ್ಖಂಡ್ ಗೂ ತಮ್ಮ ಉತ್ಪನ್ನವನ್ನು ಕಳುಹಿಸುತ್ತಿರುವುದಾಗಿ ಹೆಮ್ಮೆಯಿಂದ ನುಡಿದರು.
ತಾವು ಬೆಳೆದ ಹಣ್ಣುಗಳನ್ನು ಅತ್ಯಂತ ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ ಅವರ ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು. ಅವರ ತೋಟಗಾರಿಕೆ ಇನ್ನಷ್ಟು ಯಶಸ್ವಿಯಾಗಲಿ; ಬಸವನಾಡಿನ ಮಾವಿನ ಸುವಾಸನೆ ಭಾರತದಾದ್ಯಂತ ಇನ್ನಷ್ಟು ಪಸರಿಸಲಿ! ನಮ್ಮ ರೈತರ ಪರಿಶ್ರಮ ದೇಶದಾದ್ಯಂತ ಪ್ರಖ್ಯಾತಿಯಾಗಲಿ ಎಂಬುದು ನಮ್ಮ ಹಾರೈಕೆ.



