ವೈದ್ಯಕೀಯ ಸಲಕರಣೆ, ಸಿಬ್ಬಂದಿ ನೇಮಕ ಇಲ್ಲದೆ ಶಿಗ್ಗಾವಿ ಆಸ್ಪತ್ರೆ ಉದ್ಘಾಟನೆ ನಿರಾಸೆ ಮೂಡಿಸಿದೆ: ಬಸವರಾಜ ಬೊಮ್ಮಾಯಿ
ಮೂರು ತಿಂಗಳಲ್ಲಿ ಸಿಬ್ಬಂದಿ ನೇಮಕ, ವೈದ್ಯಕೀಯ ಸಲಕರಣೆ ಒದಗಿಸಲು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ
ಹಾವೇರಿ (ಶಿಗ್ಗಾವಿ) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶಿಗ್ಗಾವಿ ಯಲ್ಲಿ ಇಂದು 250 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಆಸ್ಪತ್ರೆ ಉದ್ಘಾಟನೆ ಆದ ತಕ್ಷಣ ಆಸ್ಪತ್ರೆ ಆರಂಭ ಆಗುವುದಿಲ್ಲ. ಅವರು ವೈದ್ಯಕೀಯ ಸಲಕರಣೆ, ವೈದ್ಯರ ನೇಮಕ ವ್ಯವಸ್ಥೆ ಮಾಡಿ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ ಮಾಡಿದ್ದರೆ ಸಾರ್ಥಕ ಆಗುತ್ತಿತ್ತು. ಅದು ಆಗದಿರುವುದು ನಮಗೆ ನಿರಾಸೆಯಾಗಿದ್ದು ಕನಿಷ್ಡ ಎರಡು ಮೂರು ತಿಂಗಳಲ್ಲಿ ವೈದ್ಯರ ನೇಮಕ ಮಾಡಿ ಎಲ್ಲ ವೈದ್ಯಕೀಯ ಸಲಕರಣೆ, ಬೆಡ್ ವ್ಯವಸ್ಥೆ ಮಾಡಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇಂದು ಆರೋಗ್ಯ ಸಚಿವರು ಶಿಗ್ಗಾವಿ ಯಲ್ಲಿ 250 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಅದು ಸೂಕ್ತ ಆದರೆ, ಅವರು ಕೇವಲ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಇದರಿಂದ ಆಸ್ಪತ್ರೆ ಉದ್ಘಾಟನೆ ಆದ ತಕ್ಷಣ ಆಸ್ಪತ್ರೆ ಆರಂಭ ಆಗುವುದಿಲ್ಲ. ಯಾಕೆದಂರೆ ನಾನು ಸಿಎಂ ಆಗಿದ್ದಾಗ 250 ಬೆಡ್ ಆಸ್ಪತ್ರೆಗೆ ಮಂಜೂರಾತಿ ಮಾಡಿದ್ದೆ 7-06-2022ಕ್ಕೆ ಆಡಳಿತಾತ್ಮಕ ಆದೇಶ ಆಗಿತ್ತು. ಗುತ್ತಿಗೆದಾರರಿಗೆ 7-10-2022 ರಿಂದ 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಕರಾರಾರಿನೊಂದಿಗೆ 96.5 ಕೋಟಿ ರೂ. ಮೊತ್ತದ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಇದರ ಜೊತೆಗೆ ಸುಮಾರು 50 ಕೋಟಿ ವೆಚ್ಚದ ವೈದ್ಯಕೀಯ ಸಲಕರಣೆಗಳು, ಲ್ಯಾಬ್, ಹಾಸಿಗೆ, ಆಪರೇಷನ್ ಥೇಟರ್ ಗೆ ಬೇಕಾದ ಸಲಕರಣೆಗಳನ್ನು ಮಂಜೂರಾತಿ ಮಾಡಿದ್ದೇವು. ಈಗಾಗಲೇ 2024 ಕ್ಕೆ ಮುಗಿಯಬೇಕಾಗಿದ್ದು 2026 ಕ್ಕೆ ಮುಗಿಯುತ್ತಿದೆ. ಎರಡು ವರ್ಷ ತಡವಾಗಿ ಮುಗಿಯುತ್ತಿದೆ. ಆದಾಗ್ಯೂ ಕೂಡ ಅಲ್ಲಿ ಯಾವುದೇ ವೈದ್ಯಕೀಯ ಸಲಕರಣೆ, ಬೆಡ್ ಕೂಡ ಇರದಿರುವುದು ಸೋಚನೀಯ ಎಂದು ತಿಳಿಸಿದ್ದಾರೆ.
ಸಿಬ್ಬಂದಿ ಕೊರತೆ
ಈಗಿರುವ ನೂರು ಬೆಡ್ಡಿನ ಆಸ್ಪತ್ರೆಗೆ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸ್ಟಾಪ್ ಕೊರತೆ ಇದೆ. ಈಗ ಉದ್ಘಾಟನೆ ಮಾಡುತ್ತಿರುವ. 250 ಬೆಡ್ ಆಸ್ಪತ್ರೆಗೆ ಹೊಸ ಹುದ್ದೆಗಳು ಮಂಜೂರಾಗಿಲ್ಲಾ, ಹೀಗಿರುವಾಗ ಇದರ ಉದ್ಘಾಟನೆಯಿಂದ ಶಿಗ್ಗಾವಿ ತಾಲೂಕು ಹಾಗೂ ಸುತ್ತಲಿನ ತಾಲೂಕಿನ ಜನರಿಗೆ ಏನು ಪ್ರಯೋಜನ ಆಗುತ್ತದೆ. ಆದ್ದರಿಂದ ಈಗಿರುವ ಆಸ್ಪತ್ರೆಯಿಂದ ವ್ಯವಸ್ಥೆ ಸುಧಾರಣೆ ಆಗಲು ಸಾಧ್ಯವಿಲ್ಲ. ಈಗಾಗಲೇ ವೈದ್ಯಕೀಯ ಸೇವೆಯ ಕೊರತೆಯಿಂದ ನರಳುತ್ತಿದೆ ಎಂದು ತಿಳಿಸಿದ್ದಾರೆ.
ದಿನೇಶ ಗುಂಡೂರಾವ್ ಅವರು ಒಬ್ಬ ಸಮರ್ಥ ಆರೋಗ್ಯ ಸಚಿವರು ಎಂದು ನಂಬಿದ್ದೇವೆ. ಅವರು ಬಹಳಷ್ಟು ತಿಳುವಳಿಕೆ ಇದ್ದವರು. ಅವರು ಇದೆಲ್ಲ ವ್ಯವಸ್ಥೆ ಮಾಡಿ ಉದ್ಘಾಟನೆ ಮಾಡುತ್ತಾರೆ ಎಂದು ನಂಬಿದ್ದೇವು. ಆ ಹಿನ್ನೆಲೆಯಲ್ಲಿ ಉದ್ಘಾಟನೆ ಮಾಡುತ್ತಿರುವುದು ಒಳ್ಳೆಯದಿದ್ದರೂ ಕೂಡ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ ಮಾಡಿದ್ದರೆ ಸಾರ್ಥಕ ಆಗುತ್ತಿತ್ತು. ದಿನೇಶ ಗುಂಡೂರಾವ್ ಅವರಿಗೆ ಒಳ್ಳೆಯ ಹೆಸರು ಬರುತ್ತಿತ್ತು ಅದು ಆಗದಿರುವುದು ನಮಗೆ ನಿರಾಸೆಯಾಗಿದ್ದು ಕನಿಷ್ಡ ಎರಡು ಮೂರು ತಿಂಗಳಲ್ಲಿ ವೈದ್ಯರ ನೇಮಕ ಮಾಡಿ ಎಲ್ಲ ವೈದ್ಯಕೀಯ ಸಲಕರಣೆ, ಬೆಡ್ ವ್ಯವಸ್ಥೆ ಮಾಡಿ ಬಡ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಹಳೆ ಅಸ್ಪತ್ರೆ ರಿಪೇರಿ ಕೂಡ ಇದರಲ್ಲಿದೆ. ಅದನ್ನು ಕೂಡ ಕೂಡಲೆ ಪ್ರಾರಂಭ ಮಾಡಬೇಕೆಂದು ಆಗ್ರಹಿಸಿದ್ದಾರೆ.



