Friday, July 17, 2026
20.9 C
Belagavi

ಹಾವೇರಿ ಅತಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ: ಬಸವರಾಜ ಬೊಮ್ಮಾಯಿ

advertisement

spot_img

ಹಾವೇರಿ ಅತಿ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ: ಬಸವರಾಜ ಬೊಮ್ಮಾಯಿ

ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೃಷಿ ಪ್ರಧಾನವಾಗಿರುವ ಹಾವೇರಿ ಜಿಲ್ಲೆ ಅತಿ ವೇಗವಾಗಿ ಬೇಲೆಯುತ್ತಿದ್ದು, ಈ ನಗರಕ್ಕೆ ಕಿರೀಟ ಪ್ರಾಯವಾಗಿ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿಯ ಗುತ್ತಲ ರಸ್ತೆಯಲ್ಲಿ ಎಸ್. ಪಿ. ಗ್ರಾಂಡ್ ಕನ್ವೆನ್ಷನ್ ಹಾಲ್ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು. ಹಾವೇರಿಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡಿರುವ ಪ್ರಕಾಶ್ ಮತ್ತು ಅವರ ಸಹೋದರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾವೇರಿಗೆ ಇದು ಅವಶ್ಯಕತೆ ಇತ್ತು. ಹಾವೆರಿ ನಗರ ದೊಡ್ಡದಾಗಿ ಬೆಳೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಗಲ್ಲಿ ಅತಿ ವೇಗವಾಗಿ ಬೇಲೆಯುತ್ತಿರುವ ನಗರ ಹಾವೇರಿ. ಹಾವೇರಿ ಜಿಲ್ಲೆ ಕೃಷಿ ಪ್ರಧಾನವಾದರೂ ಜನರು ಬಹಳ ಸಾಹಸಿಗರು, ಕೃಷಿಯಲ್ಲಿ ಲಾಭಮಾಡಿರುವ ರೈತರಿದ್ದಾರೆ. ಹಾವೇರಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಂದಮೇಲೆ ಸುಮಾರು 50 ಸಾವಿರ ಎಕರೆ ರಾಣೆಬೆನ್ನೂರು, ಹಿರೆಕೆರೂರು ತಾಲೂಕಿನಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಭದ್ರಾ ಮೇಲ್ದಂಡೆ ಮಾಡುವಾಗ ಅದು ಸಾಧ್ಯವಿಲ್ಲ ಅಂತ ಹೇಳಿದ್ದರು. ಎಚ್. ಕೆ. ಪಾಟೀಲರು 2002 ರಲ್ಲಿ ತಂದಿದ್ದರು‌. ನಾನು 2012 ರಲ್ಲಿ ನೀರಾವರಿ ಮಂತ್ರಿಯಾಗಿ ಮಾಡುವುದಾಗಿ ಹೇಳಿದೆ. ಬನ್ನಿಕೋಡರು ಇದು ಸಾಧ್ಯವಿಲ್ಲ ನೀರಾವರಿ ಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು. ಹಿರೆಕೆರೂರು ಭಾಗದಲ್ಲಿ ಬಹಳ ಆಳವಾದ ಪ್ರದೇಶದಲ್ಲಿ ದೊಡ್ಡ ಬಂಡೆ ಇತ್ತು. ಅಲ್ಲಿ ಕಾಮಗಾರಿ ಮಾಡುವುದು ಕಷ್ಟವಾಗಿತ್ತು. ಕಡೆಗೆ ಕೊಂಕಣ ರೈಲ್ವೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ಸುಮಾರು ತೊಂಬತ್ತು ದಿನ ಬ್ಲಾಸ್ಟ್ ಮಾಡಿ ಯೋಜನೆ ಮಾಡಿದೆವು.

ಆಗ ಹಿರೆಕೆರೂರು ತಾಲೂಕಿನಲ್ಲ ನೀರಾವರಿ ಮಾಡಿದೆವು. ಈಗ ರಾಣೆಬೆನ್ನೂರು ಮತ್ತು ಬ್ಯಾಡಗಿ ತಾಲೂಕಿನಗಲ್ಲಿ ಮಾಡಿದ್ದೇವೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ, ಜಿಲ್ಲೆಯಲ್ಲಿ ಹೈನುಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಪ್ರತ್ಯೇಕ ಹಾಲು ಘಟಕ ಮಾಡಿದ್ದೇವೆ. ಪೌಲ್ಟ್ರಿದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ.‌ಚಹಾವೇರಿ ಕೃಷಿ ಜೊತೆಗೆ ಇತರ ಉದ್ಯಮಗಳು ಬೆಳೆಯುತ್ತಿವೆ. ಅದಕ್ಕಾಗಿ ಇಂತಹ ಕಲ್ಯಾಣ ಮಂಟಪ ಅಗತ್ಯವಿತ್ತು. ಹಾವೇರಿಗೆ ಇದು ಕಿರೀಟ ಪ್ರಾಯವಾಗಲಿದೆ. ದೊಡ್ಡ ಸಾಧನೆ ಮಾಡಿದ್ದೀರಿ, ನಿಮ್ಮ ಹೆಸರು ನಿಮ್ಮ ಮನೆತನದ ಹೆಸರು ಉಳಿಯುವಂತೆ ಆಗುತ್ತದೆ. ಇದರಿಂದ ಬಹಳಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಹಲವಾರು ಪ್ರಮುಖರು ಹಾಗೂ ಮಠಾಧೀಶರು ಸೇರಿದಂತೆ ಮಾಲಕರುಗಳಾದ ಪ್ರಕಾಶ ಹಾವೇರಿ, ಬಸಯ್ಯ ಹಿರಿಯಾಳಮಠ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img