Friday, July 17, 2026
25.1 C
Belagavi

ಮಕ್ಕಳು ಬೇಡ – ನೀವು ನಿಮ್ಮ ಮಕ್ಕಳಿಗೆ ಎಮೋಷನಲ್ ಸೇಫ್ಟಿ ಕೊಡಲು ಆಗದಿದ್ದಲ್ಲಿ.

advertisement

spot_img

*ಮಕ್ಕಳು ಬೇಡ – ನೀವು ನಿಮ್ಮ ಮಕ್ಕಳಿಗೆ ಎಮೋಷನಲ್ ಸೇಫ್ಟಿ ಕೊಡಲು ಆಗದಿದ್ದಲ್ಲಿ..*

ಒಂದು ಡಿಸ್ಫಂಕ್ಷನಲ್ ಅಥವಾ ಲೋಪಪೂರಿತ ಕುಟುಂಬ ಅಂದರೆ ಗಂಡ ಹೆಂಡತಿ, ಅತ್ತೆ ಮಾವ ಮತ್ತು ಇತರರ ನಡುವಿನ ಜಗಳ, ಮನಸ್ತಾಪ , ಅರಚಾಟ, ಪರಸ್ಪರರ ದೂಷಣೆ ಆ ಕುಟುಂಬದ ಮಕ್ಕಳ ಮೇಲೆ ಪರಿಣಾಮ ಯಾವ ಮಟ್ಟಿಗೆ ಬೀರುತ್ತೆ ಅಂದರೆ

ಒಂದೋ ಆ ಮಗು ತೀರಾ ಮೌನಕ್ಕೆ ಶರಣಾಗಿ ಬಿಡುತ್ತದೆ ಅಥವಾ ಒಂದು ಸಮಸ್ಯೆಯ ಮಗುವಾಗಿ ಬದಲಾಗುತ್ತದೆ.

ಇತ್ತೀಚೆಗೆ ಡಿಸ್ಫಂಕ್ಷನಲ್ ಫ್ಯಾಮಿಲಿಯಲ್ಲಿ ಬೆಳೆದ ಮಕ್ಕಳು ತುಂಬಾ ಹಿಂಸಾತ್ಮಕವಾಗಿ , ಅಗ್ರೆಸೀವ್ ಆಗಿ ಬದಲಾಗುತ್ತಿದೆ. ಇದಕ್ಕೆ ಹೆಣ್ಣು ಮಕ್ಕಳು ಗಂಡು ಮಕ್ಕಳು ಬೇಧವಿಲ್ಲ.

ಇದಕ್ಕಿಂತ ಆಘಾತಕಾರಿ ವಿಷಯ ಈಗಲೂ ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಜನಕ್ಕೆ ಅರಿವಿಲ್ಲ ‌ ಅಶಿಕ್ಷಿತ ಜನರಿಗೆ ಗೊತ್ತಿಲ್ಲ ಓಕೆ. ಆದರೆ ಸುಶಿಕ್ಷಿತ ಕುಟುಂಬಗಳಲ್ಲಿಯೂ ಮಕ್ಕಳೆದುರುಗಡೆಯೇ ಪರಸ್ಪರ ಕೂಗಾಟ , ತಾರಕಕ್ಕೇರುವ ಜಗಳ.. ಇಂತಹ ವಾತಾವಾರಣದಲ್ಲಿ ಬೆಳೆದು ಮಗು ಮುಂದೆ ಎಂಟೊಂಬತ್ತು ವರ್ಷವಾದಾಗ ಇದೇ ರೀತಿ ಹಿಂಸಾತ್ಮಕವಾಗಿ ವರ್ತಿಸತೊಡಗಿದಾಗ ಮಗುವಿನ ಆ ವರ್ತನೆ ಇದ್ದಕ್ಕಿದ್ದಂತೆ ತಂದೆ ತಾಯಂದಿರಿಗೆ ಅಜೀಬ್ ಅನಿಸತೊಡಗುತ್ತದೆ. ಅದನ್ನು ಹೊಡೆದು, ಬಡಿದು ,ನಿಂದಿಸಿ ಊಟ ತಿಂಡಿ ಕೊಡದೆ ಎಲ್ಲಾ ಮಾಡಿಯೂ ಅದು ಇನ್ನೂ ಮೊಂಡಾಗಿ ವರ್ತಿಸಿ ಅದೂ ಆ ಮಗುವಿನ ಶಾಲೆಯಲ್ಲಿ ನಿಮ್ಮ ಮಗಳು/ ಮಗು ಹೀಗ್ಹೀಗೆ ಅವರಿಗೆ ಒಂದು ಸೈಕಲಾಜಿಕಲ್ ಕನ್ಸಲ್ಟೇಟಿವ್ ಕೊಡಿಸಿ ಎಂದಾಗಲೇ ಅವರು ಕೌನ್ಸೆಲಿಂಗ್ ಎಂಬ ದಾರಿಗೆ ಬರುತ್ತಾರೆ.

ಮಗುವಿನ ವರ್ತನೆಗೆ ಅದರ ಪುಟ್ಟ ವಯಸ್ಸಿನಲ್ಲಿ ತಾವು ಅದಕ್ಕೆ ನೀಡಿದ ವಾತಾವರಣವೇ ಕಾರಣ ಎಂಬ ವಿಷಯ ಕುಟುಂಬದ ಅರ್ಥವಾದರೂ “ಇಲ್ಲ ಮೇಡಮ್ ಅದು ಹೇಗೆ ಅವನು ಚಿಕ್ಕವನಿದ್ದಾಗ ಆಗಿದ್ದು ಅದೆಲ್ಲಾ ಹೇಗೆ ನೆನಪಲ್ಲಿ ಇರುತ್ತೆ? “ಎಂದೆಲ್ಲಾ ವಾದಿಸುತ್ತಾರೆ‌.

ನಾನು ಯಾವಾಗಲೂ ಹೇಳುವುದು ಮಗುವಿನ ಮೊದಲ ಐದು ವರ್ಷಗಳು ಬಹಳ‌ಮುಖ್ಯ‌, ಆ ಸಮಯದಲ್ಲಿಯೇ ಮಗುವಿನ ಮನಸು ವ್ಯಕ್ತಿತ್ವ ಎಲ್ಲವೂ ರೂಪುಗೊಳ್ಳುವ ಸಮಯ .

ಈ ಸಮಯದಲ್ಲಿ ಮಗು “ಸುರಕ್ಷಿತವಾಗಿದ್ದೀನಾ?” ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕುತ್ತಿರುತ್ತದೆ. ಮನೆಯಲ್ಲಿ ಜಗಳ, ಕೂಗಾಟ, ಭಯ, ಅನಿಶ್ಚಿತತೆ ಇದ್ದರೆ, ಮಗುವಿನ ಮೆದುಳು ಅದನ್ನು ಡೇಂಜರ್ ಎಂದು ಗುರುತಿಸುತ್ತದೆ. ಇಂತಹ ಸಿಗ್ನಲ್ ಬಂದಾಗ ಒಂದೋ Fight response (ಅಗ್ರೆಷನ್) ಅಂದರೆ

ಮಗು “ಸುರಕ್ಷಿತವಾಗಿರಲು ನಾನು ಹೀಗೇ ಕೂಗಾಡಿ ಬೇಕು ಹಿಂಸೆ ತೋರಿಸಬೇಕು” ಎಂದು ತಪ್ಪಾಗಿ ಕಲಿತುಕೊಳ್ಳುತ್ತದೆ. ಇಲ್ಲಿಂದ ಅದು ಹೊಡೆಯುವುದು, ಕೂಗುವುದು, ವಿರೋಧಿಸುವುದು ಇವುಗಳನ್ನು ಬಳಸುತ್ತದೆ. ಮಗುವಿನ ಮನಸಿನ ಮಟ್ಟಿಗೆ ಇದು ಕೆಟ್ಟ ವರ್ತನೆ ಅಲ್ಲವೇ ಅಲ್ಲ ಇದು ಸರ್ವೈವಲ್ ಸ್ಕಿಲ್ ( ಬದುಕಲು ಬೇಕಾದ ಬಿಹೇವಿಯರ್) ಅಥವ Freeze / Flight response (ಮೌನ, ಒಳಗೆ ಸರಿದುಬಿಡುವುದು)

ಆಗಿ ಮಕ್ಕಳು ಸಂಪೂರ್ಣ ಮೌನವಾಗುತ್ತಾರೆ. ಅವರು ಭಯದಿಂದ ತಮ್ಮ ಭಾವನೆಗಳನ್ನು ಅಡಗಿಸಿಕೊಳ್ಳುತ್ತಾರೆ. ಇದೇ ಮುಂದೆ anxiety, low self-esteem ಆಗಿ ಹೊರಹೊಮ್ಮಬಹುದು.

ಮಕ್ಕಳಿಗೆ ಐದು ವಯಸಿನವರೆಗಿನ ಘಟನೆಗಳು ನೆನಪಿರುವುದಿಲ್ಲ ಆದರೆ ಆ ಘಟನೆಗಳಿಂದಾದ ಭಾವನೆಗಳನ್ನು ದೇಹ ಮತ್ತು ಮೆದುಳು ಸಂಗ್ರಹಿಸಿಕೊಳ್ಳುತ್ತದೆ.

ಇದೇ Implicit Memory 

ಅಂದರೆ, ಮಗು “ಅಪ್ಪ ಅಮ್ಮ ಜಗಳ ಮಾಡ್ತಿದ್ರು” ಅಂತ ಹೇಳಲು ಆಗಲ್ಲ ಆದರೆ ಮಗುವಿನ ದೇಹ ಮತ್ತು ಮನಸಿನಲ್ಲಿ “ಭಯ, ಅಶಾಂತಿ” ಎಂಬ ಅನುಭವ ಹುದುಗಿರುತ್ತದೆ.

Attachment Theory ಪ್ರಕಾರ:

ಮಗು ತನ್ನ ಪೋಷಕರಿಂದ “ನಾನು ಪ್ರೀತಿಸಲ್ಪಟ್ಟವನೋ?” “ನಾನು ಸುರಕ್ಷಿತನಾ?” ಎಂಬ ಭಾವನೆ ರೂಪಿಸಿಕೊಳ್ಳುತ್ತದೆ.

ಜಗಳದ ವಾತಾವರಣದಲ್ಲಿ ಬೆಳೆದರೆ, ಅದು insecure attachment ಆಗುತ್ತದೆ.

ಇದರಿಂದ ಮುಂದೆ ಸಂಬಂಧಗಳಲ್ಲಿ:

ಅತಿಯಾಗಿ ಅಂಟಿಕೊಳ್ಳುವುದು

ಅಥವಾ ಸಂಪೂರ್ಣ ದೂರವಾಗುವುದು

ಎಂಬ ಎರಡೂ ಎಕ್ಸ್ಟ್ರೀಮ್ ವರ್ತನೆಗಳು ಕಾಣಬಹುದು.

ಮಗುವಿನ ಮೆದುಳಿನ Amygdala ಹೆಚ್ಚು ಸಕ್ರಿಯವಾಗುತ್ತದೆ (ಭಯ ಕೇಂದ್ರ),

ಆದರೆ Prefrontal Cortex ಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ.

ಅದರರ್ಥ ಮಗು ಹೆಚ್ಚು “ಭಾವನೆಯಿಂದ” ಪ್ರತಿಕ್ರಿಯಿಸುತ್ತದೆ, ವಿವೇಚನೆ ಕಡಿಮೆಯಾಗಿ ಹೋಗಿರುತ್ತೆ.

ನಿಮಗೆ ಇತ್ತೀಚೆಗೆ ಮಕ್ಕಳಾಗಿದ್ದರೆ ಅಥವಾ ಐದು ವರ್ಷದ ಕೆಳಗಿನ ಮಕ್ಕಳು ಇದ್ದರೆ ಅಥವಾ ಮಗುವನ್ನು ನಿರೀಕ್ಷಿಸುತ್ತಿದ್ದರೆ ನೆನಪಿಡಿ

1.ಮಗು ನೋಡಿ ಕಲಿಯುತ್ತದೆ ಹೊರತು ಮುಂದೆ ಹೇಳಿ ಉಪದೇಶಿಸಿ ಕಲಿಯಲ್ಲ

2. ಗಂಡ ಹೆಂಡತಿ ಜಗಳ ಮಾಡಬೇಡಿ ಅಂತಲ್ಲ ಆದರೆ ಅದನ್ನು ಹೇಗೆ ಪರಿಹರಿಸಿಕೊಳ್ತೀರಿ ಅನ್ನುವುದು ಮುಖ್ಯ ಕೂಗಾಟ, ಅವಮಾನ, ನಿಂದನೆ, ದೂಷಣೆ, ಹಿಂಸೆ ಬೆದರಿಕೆ, ಭಯ ಇವುಗಳ ಬದಲು ಜಗಳವನ್ನು ಮುಖಾಮುಖಿ ಕೂತು ಪೇಪರ್ ಪೆನ್ ಹಿಡಿದು ಬರೆದು ಚರ್ಚಿಸಿ ಪರಿಹರಿಸಿಕೊಳ್ಳಿ, ಮಗುವಿನ ಮುಂದೆ ಇನ್ನೊಬ್ಬರ ಅವಹೇಳನ ಮಾಡಬೇಡಿ. ಗೌರವ ವಿರಲಿ ಇದರಿಂದ ಮಗುವಿಗೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಸಹಜ ಆದರೆ ಅವುಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂದು ಕಲಿಯುತ್ತದೆ.

3. ನೀವು ಕೊಡುವ ಊಟ ಬಟ್ಟೆ , ಸೌಲಭ್ಯ ಇವುಗಳ ಹಾಗೆಯೇ “Emotional safety” ಅನ್ನೋದು ಕೂಡ ಮಗುವಿಗೆ basic need

ಇದರಿಂದ ಮಗುವಿನ ಮೆದುಳಿನ ಬೆಳವಣಿಗೆ ಸಮತೋಲನವಾಗಿ ಆಗುತ್ತೆ.

 

4. ಮಗುವಿನ ಭಾವನೆಗಳನ್ನು ತಿರಸ್ಕರಿಸಬೇಡಿ “ಇದು ಏನು ಸಣ್ಣ ವಿಷಯಕ್ಕೆ ಅಳ್ತಿಯಾ?”“ಅಳಬೇಡ, strong ಆಗು ”ಅಂತೆಲ್ಲಾ ಹೇಳಬೇಡಿ , ಇದರಿಂದ ಮಗು ತನ್ನ ಭಾವನೆಗಳನ್ನು suppress ಮಾಡುತ್ತದೆ. ಅದಕ್ಕೆ ಬದಲು “ನಿನಗೆ ಕಷ್ಟ ಆಗ್ತಿದೆಯಾ?” “ನಾನು ನಿನ್ನ ಜೊತೆ ಇದ್ದೀನಿ” ಎಂದು ಹೇಳಿ, ಮಗುವಿನಿಂದ ತಪ್ಪಾಗುವುದು ಸಹಜ ಆಗಲೂ ಅವಳ/ ಅವನ ಜೊತೆಯಲ್ಲಿ ನೀವಿದ್ದೀರ ಎಂಬ ಭಾವನೆಯೇ ಅದನ್ನು ಭಾವನಾತ್ಮಕವಾಗಿ ಗಟ್ಟಿಯಾಗಿ ಮಾಡುತ್ತೆ.

5. ಮೊದಲ 5 ವರ್ಷಗಳಲ್ಲಿ ನಂಬಿಕೆ, ಆತ್ಮವಿಶ್ವಾಸ, ಭಾವನೆಗಳ ನಿರ್ವಹಣೆ ಇವೆಲ್ಲಾ ರೂಪುಗೊಳ್ಳುತ್ತವೆ.

6. ನೀವು “Perfect parent” ಆಗಬೇಕಾಗಿಲ್ಲ ,ಪ್ರೆಸೆಂಟ್ parent” ಆಗಬೇಕು ಅಂದರೆ ಮಗುವಿನ ಮನಸಿನ ಮಾತನ್ನು ಕೇಳುವವರು, ಅದಕ್ಕೆ ಸಮಯ ಕೊಡುವವರು ಪ್ರೀತಿಯಿಂದ respond ಮಾಡುವಂತಹವರು

7. ಶಿಸ್ತು ಎಂದರೆ ಶಿಕ್ಷೆ ಅಲ್ಲ‌

ಹೊಡೆದು, ಕೂಗಿ ಶಿಸ್ತನ್ನು ಕಲಿಸುವೆ ಎಂದು ಹೊರಡುವುದು ಭಯವನ್ನು ಕಲಿಸುತ್ತದೆ , ಆದರೆ ಬದುಕಿನ ಬೆಲೆಯನ್ನಲ್ಲ, ಶಿಸ್ತು ಅಂದರೆ‌ ಮಗುವಿಗೆ ಯಾವದೇ ರೀತಿಯ ಮೊದಲ ಹೆಜ್ಜೆಗೆ ಗೈಡ್ ಮಾಡುವುದು, ಅಂದರೆ ಸಾಧಕ ಬಾಧಕಗಳನ್ನು ಮಗುವಿಗೆ ಅರ್ಥ ಆಗುವ ರೀತಿಯಲ್ಲಿ ವಿವರಿಸುವುದು. ಬದುಕಿನ ಇತಿಮಿತಿ ಬೌಂಡರಿಗಳನ್ನು ಕಲಿಸುವುದು

ಹೊಸ ಪೋಷಕರು ಅಥವಾ ಭಾವಿ ಪೋಷಕರಾದರೂ ಇವುಗಳನ್ನು ನೋಡೀ ಅರ್ಥ ಮಾಡಿಕೊಳ್ಳಿ , ಇದರಿಂದ ಮುಂದೆಂದೋ ನಿಮ್ಮ ಮಗು ಸಮಸ್ಯೆಯ ಮಗುವಾಗಿ ಬದಲಾಗುವುದನ್ನು ತಪ್ಪಿಸಬಹುದು.

( ಎಲ್ಲರ ಬದುಕಿನಲ್ಲಿಯೂ ಅನಿಶ್ಚಿತತೆ, ಆತಂಕ, ಭಯ ಪರಸ್ಪರ ಭಾವನೆಗಳ ಬಗ್ಗೆ ಅನುಮಾನ, ಭಿನ್ನಾಭಿಪ್ರಾಯ ಸಾಮಾನ್ಯ ಅವುಗಳನ್ನು ಪರಿಹರಿಸಿಕೊಳ್ಳಲಾಗದ ಅನಿವಾರ್ಯತೆ ಅಥವಾ ಪರಸ್ಪರ ಇಗೋ ತೀರಾ ಜಾಸ್ತಿ ಇದ್ದರೆ ದಯವಿಟ್ಟು ಮಕ್ಕಳು ಮಾಡಿಕೊಳ್ಳಬೇಡಿ‌, ನಿಮ್ಮ ತಪ್ಪಿಗೆ ಮಗು ಬಲಿ ಆಗುವುದು ಬೇಡ)

ನೆನಪಿಡಿ ಪೇರೆಂಟಿಂಗ್ ಸಹಾ ಕಲಿಯಲೇಬೇಕಾದ ಸ್ಕಿಲ್. ಅದನ್ನು ಕಲಿಯಿರಿ, ಓದಿರಿ ಅಥವಾ ವಿಡಿಯೋ ನೋಡಿ ಅಲ್ಲಿ ನಿಮ್ಮ ನಿಮ್ಮ ಓರೆ ಕೋರೆಗಳನ್ನು, ಸರೀ ತಪ್ಪುಗಳನ್ನು ಅರ್ಥ ಮಾಡಿಕೊಂಡು, ನಾನೀಗ ಒಂದೊಳ್ಳೆ ಪೋಷಕನಾಗುವ ಅರ್ಹತೆ ಪಡೆದಿದ್ದೇನೆಯೇ ಎಂದು ಅರಿಯುವ ಮನಸು ಮಾಡುವುದರ ಮೂಲಕ.

ಸಮಸ್ಯೆಯ ಮಕ್ಕಳನ್ನು ನೋಡಿ ನೋಡೀ ಮನಸು ಮರುಗುತ್ತಿದೆ‌‌ .. ಒಂದು ಮಗು ಹಿಂಸಾತ್ಮಕವಾಗೀ ವರ್ತಿಸಿ. ಈಗ ಹಾಸ್ಪಿಟಲ್ನ್ಲಲಿ ಸೈಕಿಯಾಟ್ರಿಕ್ ಟ್ರೀಟ್ಮೆಂಟ್ ಪಡೆಯುತ್ತಿದೆ‌ ಇನ್ನೊಂದು ಅದೇ ದಾರಿಯಲ್ಲಿದೆ . ಇನ್ನೊಂದಷ್ಟು ಜನ ಪೋಷಕರು ಮತ್ತು ಮಕ್ಕಳು ಪರಸ್ಪರ ವೈರಿಗಳಂತೆ‌ ಕಾದಾಡುತ್ತಿದ್ದಾರೆ, ಇವರೆಲ್ಲರ ವರ್ತನೆಯ‌ಹಿಂದಿನ ಕಾರಣ ಡಿಸ್ಫಂಕ್ಷನಲ್ ಕುಟುಂಬ)

 

*- ಡಾ. ರೂಪಾ ರಾವ್, ಖ್ಯಾತ ಮನೋ ತಜ್ಞರು..*

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img