ಶ್ರೀ ವಚನಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದ ಸಮರ್ಥ್ ಶಾಮನೂರು
ಹರಿಹರದ ಪಂಚಮಸಾಲಿ ಗುರುಪೀಠಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಭೇಟಿ ನೀಡಿ ಶ್ರೀ ವಚನಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಶ್ರೀಗಳು ಶಾಮನೂರು ಶಿವಶಂಕರಪ್ಪಾಜಿಯವರು ಎಲ್ಲಾ ಸಮಾಜದವರಿಗೂ ಒಂದು ರೀತಿ ನೆರಳು ಇದ್ದಂತೆ
ಅವರ ಹಾದಿಯಲ್ಲಿ ನೀನು ನಡೆಯುತ್ತಿದ್ದೀಯಾ ಇದೇ ರೀತಿ ಸಮಾಜ ಸೇವೆ ಮುಂದುವರೆಸು ಎಂದು ಸಮರ್ಥ್ ಅವರಿಗೆ ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಆರ್ .ಟಿ ಪ್ರಶಾಂತ್ ಸೇರಿದಂತೆ ಹಲವು ಮುಖಂಡರುಗಳಿದ್ದರು.



