Friday, July 17, 2026
20.9 C
Belagavi

ಸಂತೋಷ್‌ ಲಾಡ್‌ ಹಾಡಿ ಹೊಗಳಿದ ಶಾಸಕ ಕೋನರಡ್ಡಿ

advertisement

spot_img

ಸಂತೋಷ್‌ ಲಾಡ್‌ ಹಾಡಿ ಹೊಗಳಿದ ಶಾಸಕ ಕೋನರಡ್ಡಿ
==================
ಸಂತೋಷ್‌ ಲಾಡ್‌ ಅಂದರೆ ಫೈವ್‌ ಸ್ಟಾರ್‌ ಇದ್ದಂಗೆ
=======
ಗಿಗ್‌ ಕಾರ್ಮಿಕರಿಗೆ ನೆರವು, ಶ್ರಮಿಕ ವಸತಿ ಶಾಲೆಗಳ ಸ್ಥಾಪನೆ ಪ್ರಸ್ತಾಪ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಇಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರ ಕಾರ್ಯವೈಖರಿಯನ್ನು ನವಲಗುಂದ ಶಾಸಕರಾದ ಎನ್‌ ಎಚ್‌ ಕೋನರಡ್ಡಿ ಅವರು ಮನತುಂಬಿ ಪ್ರಶಂಸಿಸಿದರು.ಸಂತೋಷ್‌ ಲಾಡ್‌ ಎಂದರೆ ಫೈವ್‌ ಸ್ಟಾರ್‌ ಇದ್ದಂಗೆ. ಕಳೆದ ಮೂವತ್ತು ವರ್ಷಗಳಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್‌ ನಲ್ಲಿ ಇದ್ದೇನೆ. ಕಾರ್ಮಿಕ ಇಲಾಖೆಯ ಸಚಿವರು ಯಾರು ಅಂತಾನೆ ತಿಳಿಯುತ್ತಿರಲಿಲ್ಲ. ಈಗ ಸಂತೋಷ್‌ ಲಾಡ್‌ ಅವರು ಸಚಿವರಾಗಿದ್ದಾರೆ. ಅವರು ತಮ್ಮ ಕೆಲಸದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ ಎಂದರು.

ಅವರನ್ನು ಕಾರ್ಮಿಕ ಸಚಿವರಾಗಿ ನೇಮಿಸಿದ ಏನಪ್ಪ ಇಂತಹ ಖಾತೆ ಕೊಟ್ಟರು? ಏನು ಮಾಡ್ತಿಯಾ ಎಂದಿದ್ದೆ. ನಾನು ಕೆಲಸ ಮಾಡಿ ತೋರಿಸುತ್ತೇನೆ ಎಂದಿದ್ದರು. ಅವರು ಗಿಗ್‌ ಕಾಯಿದೆ ತಂದರು ಇಡೀ ದೇಶವೇ ಅದನ್ನು ಮೆಚ್ಚಿತು. ರಾಹುಲ್‌ ಗಾಂಧಿ ಅವರು ಪ್ರಶಂಸಿದರು, ಮುಖ್ಯಮಂತ್ರಿಗಳು ಅದನ್ನು ಹೊಗಳಿದರು. ಆ ಕಾಯಿದೆಯಿಂದ ಸಾಕಷ್ಟು ಕಾರ್ಮಿಕರಿಗೆ ಒಳ್ಳೆಯದಾಗಿದೆ ಎಂದರು.

ಹೊಸ ಹೊಸ ಯೋಜನೆಗಳು: ಕಾರ್ಮಿಕ ಇಲಾಖೆಯಲ್ಲಿ ಹೊಸ ಹೊಸ ಯೋಜನೆ ಜಾರಿ ಮಾಡಿ ಇವತ್ತು ಕಾರ್ಮಿಕ ಇಲಾಖೆ ಇದೇ ಎಂಬುದನ್ನು ತೋರಿಸಿದರು. ಕೂಲಿ ಕಾರ್ಮಿಕರ ಮಕ್ಕಳಿಗೆ 104 ವಸತಿ ಶಾಲೆಗಳನ್ನು ಮಂಜೂರು ಮಾಡಿದರು. ನಮ್ಮ ಜಿಲ್ಲೆಗೂ ಶಾಲೆ ಮಂಜೂರು ಮಾಡಿದ್ದಾರೆ ಎಂದು ವಿವರಿಸಿದರು.

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img