Friday, July 17, 2026
20.9 C
Belagavi

ಗರ್ಭಿಣಿಯರನ್ನು 10 ನೇ ವಾರದಲ್ಲಿಯೇ ಕಡ್ಡಾಯ ನೋಂದಣಿ ಮಾಡಲಾಗುತ್ತಿದೆ: ದಿನೇಶ್ ಗುಂಡೂರಾವ್

advertisement

spot_img

*ಗರ್ಭಿಣಿಯರನ್ನು 10 ನೇ ವಾರದಲ್ಲಿಯೇ ಕಡ್ಡಾಯ ನೋಂದಣಿ ಮಾಡಲಾಗುತ್ತಿದೆ: ದಿನೇಶ್ ಗುಂಡೂರಾವ್

ಹೆಣ್ಣು ಭ್ರೂಣ ಹತ್ಯೆ ತಡೆಯಲು ಕೈಗೊಂಡ ಕ್ರಮಗಳ ಕುರಿತು ವಿಧಾನಪರಿಷತ್ ನಲ್ಲಿ ಉಮಾಶ್ರೀಯವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್

ಇದೊಂದು ಸಾಮಾಜಿಕ ಪಿಡುಗು. ಕಾನೂನು ಮಾಡುವುದರಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಗಂಡುಮಕ್ಕಳಿಲ್ಲದಿದ್ದರೆ ನಮ್ಮ ಕುಲವೇ ಮುಗಿದು ಹೋಗುತ್ತದೆ. ಗಂಡು ಮಕ್ಕಳಿದ್ದರೆ ಮಾತ್ರ ನಮ್ಮ ವಂಶ ಬೆಳಗುತ್ತದೆ ಎನ್ನುವ ಭಾವನೆಗಳು ಕೆಲ ಪ್ರದೇಶದಲ್ಲಿ ಇದೆ. ಈಗಾಗಲೇ ಪಿಎನ್ ಟಡಿಟಿ ಸೇರಿದಂತೆ ಹಲವಾರು ಕಾನೂನುಗಳಿದೆ. ಬಾಲಿಕಾ ಸಾಪ್ಟವೇರ್ ಅಡಿ ಎಲ್ಲ ಸ್ಕ್ಯಾನಿಂಗ್ ಸೆಂಟರ್ ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣ ನಡೆಸಲಾಗುತ್ತಿದೆ. ಈವರೆಗೆ 80 ಪ್ರಕರಣಗಳಲ್ಲಿ ದಂಡ ವಿಧಿಸಿ, 70 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈಗಾಗಲೇ 3 ವೈದ್ಯರು, 5 ನರ್ಸ್ ಗಳ ಮೇಲೆ FIR ದಾಖಲಿಸಲಾಗಿದೆ. ಗುಪ್ತ ಕಾರ್ಯಾಚರಣೆಯನ್ನು ಇಲಾಖೆಯ ಅಧಿಕಾರಿಗಳು ನಡೆಸುತ್ತಿದ್ದಾರೆ.

ನಮ್ಮ ಅಧಿಕಾರಿಗಳು ಅಲ್ಟ್ರಾಸೌಂಡ್ ಸೆಂಟರ್ ಗೆ ಹೋಗಿ ನಿಯಮಿತ ತಪಾಸಣೆ ನಡೆಸುತ್ತಾರೆ. ಭಾಗ್ಯಲಕ್ಷ್ಮಿ ಬಾಂಡ್, ಗೃಹಲಕ್ಷ್ಮೀ ಯಂತ ಯೋಜನೆಗಳ ಮೂಲಕ ಹೆಣ್ಣುಮಕ್ಕಳ ಕುರಿತು ಸಕಾರಾತ್ಮಕ ಭಾವನೆ ಮೂಡುವಂತೆ ಎಲ್ಲ ಸರ್ಕಾರಗಳು ಪ್ರಯತ್ನ ಮಾಡಿದೆ. ಮಹಿಳೆಯರಿಗೆ ಉಚಿತ ಶಿಕ್ಷಣ, ಎಲ್ಲ ಆದ್ಯತೆ ನೀಡುವ ಮೂಲಕ ಮಹಿಳೆಯರು ಸಾಮಾಜಿಕವಾಗಿ ಸಮಾನರು ಎನ್ನುವುದನ್ನು ಮನವರಿಕೆ ಮಾಡುತ್ತಿದ್ದೇವೆ. ಹೆಚ್ಚೆಚ್ಚು ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಖಚಿತ ಮಾಹಿತಿ ಆಧರಿಸಿ ಏಳು ಕಡೆ ದಾಳಿ ನಡೆಸಿ ಕಾನೂನು ಪ್ರಕಾರ ಕೇಸ್ ದಾಖಲಿಸಲಾಗಿದೆ. ಪ್ರಕರಣಗಳು ನ್ಯಾಲಯದಲ್ಲಿದೆ. ಒಂದು ಲಕ್ಷ ಬಹುಮಾನ ಸಹ ಘೋಷಿಸಲಾಗಿತ್ತು. ಮೂರು ಜನರು ಸರಿಯಾದ ಮಾಹಿತಿ ನೀಡಿ ಬಹುಮಾನ ಪಡೆದಿದ್ದಾರೆ. ಲಿಂಗ ಪತ್ತೆ ಮಾಡುವ ಪ್ರಕ್ರಿಯೆ ಗರ್ಭ ದರಿಸಿ 12 ವಾರ ಕಳೆದ ನಂತರ ಮಾತ್ರ ಮಾಡಲಾಗುತ್ತದೆ. ಈವರೆಗೂ 12 ವಾರ ಆದ ನಂತರ AMC ರಿಜಿಷ್ಟ್ರೇಶನ್ ಮಾಡಲಾಗುತ್ತಿತ್ತು. ಈಗ ಬದಲಾವಣೆ ಮಾಡಿ 10 ನೇ ವಾರಕ್ಕೆ ರಿಜಿಷ್ಟ್ರೇಶನ್ ಮಾಡಲಾಗುತ್ತದೆ. ಇದರಿಂದ ಭ್ರೂಣ ಹತ್ಯೆ ತಡೆಯಲು ಸಹಾಯಕ. ಭ್ರೂಣ ಹತ್ಯೆ ತಡೆಯಲು ಎಲ್ಲ ಜಿಲ್ಲೆಗಳಲ್ಲಿ ಹಿರಿಯ ವೈದ್ಯರನ್ನು ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ.

ಸ್ಕ್ಯಾನಿಂಗ್ ಸೆಂಟರುಗಳು ಹೆಚ್ಚು ಇರುವುದರಿಂದ ಬೆಂಗಳೂರಿನಲ್ಲಿ 5 ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ನಿಯಮಿತವಾಗಿ ಸ್ಕ್ಯಾನಿಂಗ್ ಸೆಂಟರ್ ತಪಾಸಣೆ ಮಾಡುತ್ತಾರೆ. ಈಗ ಮೋಬೈಲ್ ಅಲ್ಟ್ರಾಸೌಂಡ್ ಮಶಿನ್ ಬಂದು ಮತ್ತೊಂದಿಷ್ಟು ಸವಾಲು ಎದುರಾಗಿದೆ. ಹೀಗೆ ಸರ್ಜಾರ ಭ್ರೂಣ ಹತ್ಯೆ ತಡೆಯಲು ಜನಜಾಗೃತಿ, ಕಾನೂನಾತ್ಮಕ, ಇಲಾಖೆಯಿಂದ ಸದಾ ಜಾಗೃತವಾಗಿ ಪ್ರಯತ್ನಿಸುತ್ತಿದೆ.

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img