Monday, June 1, 2026
26.1 C
Belagavi

ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ

advertisement

spot_img

ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ

ಬ್ಯಾಡಗಿಯಲ್ಲಿ ಮೆಣಸಿನಕಾಯಿ ಸಂಶೋಧನಾ ಕೇಂದ್ರದ ಬೇಡಿಕೆ ಇದೆ‌: ಬಸವರಾಜ ಬೊಮ್ಮಾಯಿ

ಹಾವೇರಿ(ಬ್ಯಾಡಗಿ) ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಅವಕಾಶ ಇದೆ. ಯುವಕರು ಒಳ್ಳೆಯ ರೀತಿಯಿಂದ ಪ್ರಾಮಾಣಿಕವಾಗಿ, ನೈತಿಕತೆಯಿಂದ ವ್ಯಾಪಾರ ಮಾಡಿದರೆ ಲಾಭದ ಜೊತೆಗೆ ಪುಣ್ಯವೂ ಲಭಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂಬಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತೆರೆದಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಸುದರ್ಶನ ಕೋಲ್ಡ್ ಸ್ಟೋರೇಜ್ ಇದರ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು. ಇವತ್ತು ಅತ್ಯಂತ ಸಂತಷದ ದಿನ ಬ್ಯಾಡಗಿಯಲ್ಲಿ ಕೋಲ್ಡ್ ಸ್ಟೋರೆಜ್ ಪ್ರಾರಂಭ ಆಗುತ್ತಿದೆ. ಒಟ್ಟು ನಲವತ್ರು ಕೋಲ್ಡ್ ಸ್ಟೋರೆಜ್ ಈ ವರ್ಷದಲ್ಲಿ ಬ್ಯಾಡಗಿ ಸುತ್ತ ಮುತ್ತ ತಲೆ ಎತ್ತುತ್ತಿವೆ. ಬ್ಯಾಡಗಿಯ ಮಾರುಕಟ್ಟೆಯನ್ನು ನಿರ್ಮಿಸಿರುವ ವ್ಯಾಪಾರಸ್ಥರು ಮತ್ತು ರೈತರ ಸಂಪೂರ್ಣ ಸಹಕಾರದಿಂದ ಬ್ಯಾಡಗಿ ಜಗತ್ ಪ್ರಸಿದ್ದ ವಾಗಿದೆ‌. ಇದಕ್ಕೆ ಸುಮಾರು ಐವತ್ತು ವರ್ಷದ ಪರಿಶ್ರಮ ಇದೆ. ಇಲ್ಲಿ ಬಹಳ ಸಣ್ಣ ಪ್ರಮಾಣದಲ್ಲಿ ಆರಂಭವಯಿತು. ಆಗ ನಮ್ಮೂರು ಕಮಡೊಳ್ಳಿಯಲ್ಲಿ ಪಕ್ಕ ಜಾಗನೂರು ಅಂತ ಇದೆ. ಅಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಾರೆ. ಜಾಗನೂರು ಸ್ಪೆಷಲ್ ಅಂತ ಮೆಣಸಿನಕಾಯಿ ಇದೆ. ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಾರೆ. ಬೇಸಿಗೆ ಸಮಯದಲ್ಲಿ ಹೋದರೆ ಎಲ್ಲ ಕೆಂಪು ಬಣ್ಣ ಕಾಣಿಸುತ್ತಿತ್ರು. ಅಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿತ್ತು. ಅದೆಲ್ಲವೂ ಬ್ಯಾಡಗಿಗೆ ಬರುತ್ತಿತ್ತು. ಅಣ್ಣಿಗೇರಿ ಮೆಣಸಿನಕಾಯಿ ಕೂಡ ಬಹಳ ಪ್ರಸಿದ್ದವಾಗಿದೆ. ಆ ಭಾಗದ ರೈತರ ಶ್ರಮ ಬ್ಯಾಡಗಿ ವ್ಯಾಪಾರಸ್ಥರ ಬುದ್ದಿವಂತಿಕೆಯಿಂದ ಬ್ಯಾಡಗಿ ಮೆಣಸಿನಕಾಯಿ ಜಗತ್ ಪ್ರಸಿದ್ದ ವಾಗಿದೆ. ಬ್ಯಾಡಗಿ ಎಪಿಎಂಸಿ ಅಂದರೆ ಬಹಳ ಶ್ರೀಮಂತ ಎಪಿಎಂಸಿ ಆಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಆಗುತ್ತಿದೆ ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರದ ಬೇಡಿಕೆ ಇದೆ‌. ನಾವಿದ್ದಾಗ ಬಜೆಟ್ ನಲ್ಲಿ ಅನುಮೊದನೆ ಮಾಡಿದ್ದೇವು, ಈಗ ಅದನ್ನು ಅಳವಡಿಸಿಕೊಳ್ಳುವ ಭರವಸೆ ಇದೆ. ಬ್ಯಾಡಗಿ ಮೆಣಸಿನಕಾಯಿ ಸಂಶೋಧನೆ ಮಾಡಿ ಔಷಧಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ನೈಸರ್ಗಿಕವಾಗಿ ಬೆಳೆದ ಮೆಣಸಿನಕಾಯಿ ಔಷಧಿಗಳಲ್ಲಿ ಬಳಕೆ ಮಾಡುತ್ತಾರೆ. ಅದನ್ನು ಬಂಗಾರ ತೂಕ ಮಾಡಿದಂತೆ ಮಾಡುತ್ತಾರೆ. ಮೆಣಸಿನಕಾಯಿ ಹಲವಾರು ರೀತಿ ಉಪಯೋಗ ಆಗುತ್ತಿದೆ ಎಂದು ಹೇಳಿದರು.ತಾಳ್ಮೆ ಮುಖ್ಯ
ಬ್ಯಾಡಗಿ ಎಪಿಎಂಸಿ ಅತಿ ಹೆಚ್ಚು ಸೆಸ್ ಕೊಡುವ ಎಪಿಎಂಸಿ ಆಗಿದೆ‌. ಇವತ್ತು ಸುದರ್ಶನ್ ಕೋಲ್ಡ್ ಸ್ಟೋರೆಜ್ ಉಮೇಶ, ವಿನಾಯಕ ಮತ್ತು ಅವಿನಾಶ್ ಪಾಟೀಲ್ ಸೇರಿ ಕೋಲ್ಡ್ ಸ್ಟೋರೆಜ್ ಮಾಡಿದ್ದಾರೆ. ಇದು ಅತ್ಯಂತ ಯಶಸ್ವಿಯಾಗಿ ರೈತರಿಗೆ ಅನುಕೂಲ ಆಗಲಿ. ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ಲಾಭದಲ್ಲಿ ಪುಣ್ಯ ಗಳಿಸಲು ಅವಕಾಶ ಇದೆ.
ನಾನು ಆದ್ಯಾತ್ಮ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡುತ್ತೇನೆ ನಾನು ಆರ್ಥಿಕತೆಯಲ್ಲಿ ಪಾಪ ಪುಣ್ಯ ನೋಡುತ್ತೇನೆ. ಆಧ್ಯಾತ್ಮದಲ್ಲಿ ಲಾಭ ನಷ್ಟ ನೋಡುತ್ತೇನೆ. ಇದರಲ್ಲಿ ಬಹಳಷ್ಡು ಹೊಸ ವಿಷಯಗಳು ಸಿಗುತ್ತದೆ. ಯುವಕರಿಗೆ ಒಳ್ಳೆಯ ರೀತಿಯಿಂದ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದರೆ ನೈತಿಕತೆಯಿಂದ ಲಾಭದ ಜೊತೆಗೆ ಪುಣ್ಯವೂ ಲಭಿಸುತ್ತದೆ. ಪುಣ್ಯ ಗಳಿಸಿ ಲಾಭಗಳಿಸಿದರೆ ಅದು ಶಾಸ್ವತವಾಗಿರುತ್ತದೆ. ಮುಂದಿನ ಪೀಳಿಗೆಗೆ ಲಭಿಸುತ್ತದೆ. ಲಕ್ಷ್ಮಿ ಚಂಚಲ ಆದರೆ ನಾವು ಮಾಡಿರುವ ಚಟುವಟಿಕೆ ಶುದ್ದ ಅಂತಕರಣದಿಂದ ಮಾಡಿದರೆ ಲಕ್ಷ್ಮೀ ಕೂಡ ನಮ್ಮ ಜೊತೆಗೆ ಇರುತ್ತಾಳೆ. ಆದರೆ, ಅದಕ್ಕೆ ತಾಳ್ಮೆ ಮುಖ್ಯ. ತಾಳ್ಮೆಗೆ ದೊಡ್ಡ ಶಕ್ತಿ ಇದೆ. ತಾಳ್ಮೆಯಿಂದ ಕೆಲಸ ಮಾಡಿದರೆ ಎಲ್ಲವೂ ಲಭಿಸುತ್ತದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಮ.ನಿ.ಪ್ರ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಗವಿಮಠ, ಕೊಪ್ಪಳ ಶ್ರೀಗಳು ಸಾನಿಧ್ಯ ವಹಿಸಿದ್ದರು. ಮಾಜಿ ಸಂಸದರಾದ ಸಂಗಣ್ಣ ಕರಡಿ, ಮಾಜಿ ಶಾಸಕರಾದ ವೀರುಪಾಕ್ಷಪ್ಪ ಬಳ್ಳಾರಿ, ಮುಖಂಡರುಗಳಾದ ಭರತ ಬೊಮ್ಮಾಯಿ, ಸಂತೋಷ ಪಾಟೀಲ್, ಮಾಲಕರಾದ ಅವಿನಾಷ ಪಾಟೀಲ್, ವಿನಾಯಕ ಮಾಳೇನಹಳ್ಳಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img