Tuesday, February 10, 2026
31.1 C
Belagavi

ಭಾರತದ ಪ್ರಜಾಪ್ರಭುತ್ವದ ಯಶಸ್ಸನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ: ಬಸವರಾಜ ಬೊಮ್ಮಾಯಿ

advertisement

spot_img

ಪ್ರಜೆಗಳು ಪಾಲ್ಗೊಂಡಾಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ: ಬಸವರಾಜ ಬೊಮ್ಮಾಯಿ

ಭಾರತದ ಪ್ರಜಾಪ್ರಭುತ್ವದ ಯಶಸ್ಸನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ: ಬಸವರಾಜ ಬೊಮ್ಮಾಯಿ

ಗದಗ: ನಮ್ಮದು ಪ್ರತಿನಿಧಿತ್ವದ ಪ್ರಜಾಪ್ರಭುತ್ವ ನಮ್ಮ ಪ್ರತಿನಿಧಿಗಳ ಮೇಲೆ ನಮ್ಮ ಯಶಸ್ಸು ಅಪಯಶಸ್ಸು ನಿಂತಿರುತ್ತದೆ. ಮತದಾರರಿಗೆ ತನ್ನ ಮತ ಗೆಲ್ಲಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕೇವಲ ಮತ ಗೆದ್ದರೆ ಸಾಲದು ಅವರ ಮೂಲಕ ದೇಶ ಗೆಲ್ಲಬೇಕು, ಅದರಿಂದ ದೇಶದ ನಾಗರಿಕ ಗೆಲ್ಲಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಗದಗ ಪಟ್ಟಣದ ಮುಳಗುಂದ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದ ನವೀಕೃತ ಕಛೇರಿ ಉದ್ಘಾಟನೆ, ಪ್ರವೇಶ ದ್ವಾರದ ನಾಮಫಲಕ ಅನಾವರಣ ಹಾಗೂ ಗದಗ ಜಿಲ್ಲೆಯ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆತ್ಮೀಯ ವಾದ ವಾತಾವರಣ ಇಲ್ಲಿದೆ ಹಲವಾರು ವಿಚಾರದಲ್ಲಿ ನೀವು ನೇರವಾಗಿ ಪ್ರಶ್ನೆ ಕೇಳಬೇಕು ನಾವು ಉತ್ತರ ಹೇಳಬೇಕು. ಪತ್ರಕರ್ತರು ಎಂದರೆ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಕೇಳುವುದೇ ಅವರ ಧರ್ಮ. ಪತ್ರಕರ್ತರು ಪ್ರಶ್ನೆ ಎತ್ತಿದಾಗ ವಿಶ್ವಾಸಾರ್ಹತೆ ಇರುತ್ತದೆ. ನಮ್ಮನ್ನು ಬಿಟ್ಟು ನೀವಿಲ್ಲ, ನಿಮ್ಮನ್ನು ಬಿಟ್ಟು ನಾವಿಲ್ಲ.
ಒಬ್ಬ ರಾಜಕಾರಣಿ ಎಷ್ಟೇ ಕೆಲಸ ಮಾಡಿದರೂ ಅದಕ್ಕೆ ಪ್ರಚಾರ ಸಿಗಲಿಲ್ಲ ಅಂದರೆ ಏನೂ ಪ್ರಯೋಜನ ಇಲ್ಲ. ಅದೇ ರೀತಿ ಪತ್ರಿಕೆಗಳು ರಾಜಕಾರಣ ಬಿಟ್ಟು ಬೇರೆ ಸುದ್ದಿ ಹಾಕಿದರೆ ಪತ್ರಿಕೆಗಳ ಪರಿಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ. ನಾವು ಸಣ್ಣ ಸಣ್ಣ ವಿಚಾರಗಳ ಬಗ್ಗೆ ವಿನಿಮಯ ಮಾಡಿಕೊಳ್ಳಬೇಕು. ರಾಜಕಾರಣದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಪತ್ರಕರ್ತರಿಗೆ ರಾಜಕಾರಣಿಗಳು ಬೇಕು. ಜನರ ಸಮಸ್ಯೆ ಏನಿದೆ ಅಂತ ತಿಳಿಯಲು ರಾಜಕಾರಣಿಗಳಿಗೆ ಪತ್ರಕರ್ತರು ಬೇಕು ಎಂದು ಹೇಳಿದರು.ಗದಗಿನ ಪತ್ರಕರ್ತರು ಕ್ರಿಯಾಶೀಲರಾಗಿದ್ದಾರೆ. ಗದಗ ಜಿಲ್ಲಾ ಹೋರಾಟದಲ್ಲಿ ಅವತ್ತಿನ ಪತ್ರಕರ್ತರ ಹೋರಾಟ ಬಹಳ ದೊಡ್ಡದಿದೆ. ಜಿಲ್ಲಾ ವಿಂಗಡಣೆ ಮಾಡುವ ಸಂದರ್ಭದಲ್ಲಿ ಧಾರವಾಡ ಹಾವೇರಿ ಎರಡೇ ಜಿಲ್ಲೆಯಾಗಿದ್ದವು, ಎಲ್ಲ ಪಕ್ಷಗಳ ಮುಖಂಡರು ಧ್ವನಿ ಎತ್ತಿದ್ದರೂ ಸರ್ಕಾರಕ್ಕೆ ಮುಟ್ಟಿರಲಿಲ್ಲ. ಅದನ್ನು ಪತ್ರಕರ್ತರು ಸರ್ಕಾರಕ್ಕೆ ಮುಟ್ಟಿಸಿದರು. ಆಗ ಜೆ ಎಚ್. ಪಟೇಲರ ಸರ್ಕಾರ, ಅವರ ಮೂರ್ತಿಯನ್ನು ಜಿಲ್ಲಾಧಿಕಾರಿ ಭವನದ ಬಳಿ ನಿರ್ಮಿಸಬೇಕು ಎಂದರು.
ನಮ್ಮ ಕಳಸಾ ಬಂಡೂರಿ ಹೋರಾಟ ಯಶಸ್ವಿಗೆ ಪತ್ರಕರ್ತರ ಸಹಕಾರ ಕಾರಣ. ಧಾರವಾಡದಿಂದ ಪ್ರಾರಂಭವಾಗಿ ನರಗುಂದವರೆಗೂ ಪಾದಯಾತ್ರೆಯಲ್ಲಿ ಪ್ರತಿ ದಿನ ಏನು ಚರ್ಚೆಯಾಯಿತು ಬರಗಾಲದ ಬಗ್ಗೆ ಏನು ಚರ್ಚೆ ಆಯಿತು ಎನ್ನುವುದನ್ನು ಗದಗ, ರೋಣ, ನಗರಗುಂದ ಪತ್ರಕರ್ತರು ಬಹಳ ಮನಮುಟ್ಟುವಂತೆ ಬರೆದು ನಮ್ಮ ಜೊತೆಗೆ ಹೆಜ್ಜೆಗೆ ಹೆಜ್ಜೆ ಹಾಕಿದ್ದರು ಎಂದರುಪ್ರಜಾಪ್ರಭುತ್ವದಲ್ಲಿ ಜಿಲ್ಲೆ ಮಾಡಬೇಕೆಂಬ ತೀರ್ಮಾನ ಮಾಡಿದಾಗ ಅದರ ಮುಖಾಂತರ ಹುಟ್ಟುವ ಜನರ ಚಳವಳಿ ಇದೊಂದು ಚಕ್ರ ಇದು ನಿರಂತರ ತಿರುಗುತ್ತದೆ. ಪತ್ರಕರ್ತರ ಪಾತ್ರ ಬಹಳ ಬದಲಾವಣೆ ಆಗುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರ ಪಾತ್ರ ನಿರಂತರ ವಾಗಿ ನಡೆಯುತ್ತಿರಬೇಕು ಆಗ ಮಾತ್ರ ಪ್ರಜಾಪ್ರಭುತ್ವ ಜೀವಂತ ಇರುತ್ತದೆ. ಮತ ಹಾಕಿದ ನಂತರ ಮತಕ್ಕೆ ಬೆಲೆ ಬರಬೇಕು. ಮತ ಹಾಕಿದ ನಂತರ ನಡೆಯುವ ಪ್ರಕ್ರಿಯೆಯಲ್ಲಿ ಮತದಾರ ಪಾಲ್ಗೊಳ್ಳಬೇಕು. ಅದನ್ನು ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ ಅಂತ ಕರೆಯುತ್ತಾರೆ. ಪ್ರಜೆಗಳು ಪಾಲ್ಗೊಂಡಾಗ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಭಾರತದ ಪ್ರಜಾಪ್ರಭುತ್ವದ ಯಶಸ್ಸನ್ನು ಇಡೀ ವಿಶ್ವವೇ ಬೆರಗಿನಿಂದ ನೋಡುತ್ತಿದ್ದಾರೆ. ನಮ್ಮದು ಪ್ರತಿನಿಧಿತ್ವದ ಪ್ರಜಾಪ್ರಭುತ್ವ ನಮ್ಮ ಪ್ರತಿನಿಧಿಗಳ ಮೇಲೆ ನಮ್ಮ ಯಶಸ್ಸು ಅಪಯಶಸ್ಸು ನಿಂತಿರುತ್ತದೆ. ಮತದಾರರಿಗೆ ತನ್ನ ಮತ ಗೆಲ್ಲಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕೇವಲ ಮತ ಗೆದ್ದರೆ ಸಾಲದು ಅವರ ಮೂಲಕ ದೇಶ ಗೆಲ್ಲಬೇಕು, ಅದರಿಂದ ದೇಶದ ನಾಗರಿಕ ಗೆಲ್ಲಬೇಕು ಎಂದು ಹೇಳಿದರು.

ನಾನು ಸಿಎಂ ಆಗಿದ್ದಾಗ ಹಿಂದುಳಿದ ವರ್ಗದ ಪತ್ರಕರ್ತರಿಗೆ ಮಿಡಿಯಾ ಕಿಟ್, ಸ್ಥಳಿಯ ಪತ್ರಿಕೆಗಳಿಗೆ ಒಂದು ಪುಟ ಹೆಚ್ಚು ಜಾಹಿರಾತು ನೀಡಲು ತೀರ್ಮಾನ ಮಾಡಿದ್ದೆ‌. ಪ್ರಾದೇಶಿಕ ಪತ್ರಿಕೆಗಳು ಬೆಳೆಯಬೇಕು ಅಂತ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಹೊಸದಾಗಿ ಆಯ್ಕೆಯಾದ ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಕರ್ತರಿಗೆ ಅವರ ಕಾರ್ಯ ಯಶಸ್ವಿಯಾಗಲಿ ಅಂತ ಹಾರೈಸುತ್ತೇನೆ. ಪತ್ರಿಕಾ ಭವನ ನಿರ್ಮಾಣಕ್ಕೆ ನನ್ನ ಸಂಸದರ ನಿಧಿನಿಯಿಂದ 10 ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಬಿ ಅಸೂಟಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜು ಹೆಬ್ಬಳ್ಳಿ, ಕಾರ್ಯದರ್ಶಿಗಳಾದ ನಿಂಗಪ್ಪ ಚಾವಡಿ, ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Hot this week

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

Topics

ಟ್ರ್ಯಾಕ್ಟರ್ಗಳಲ್ಲಿ ಡಿಜೆ ಸೌಂಡ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಉಪವಾಸ ಧರಣಿ ಸತ್ಯಾಗ್ರಹ.

ಬೆಳಗಾವಿ: ಜಿಲ್ಲೆಯಾದ್ಯಂತ ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಿರುವ ಅಬ್ಬರದ...

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿಸಿಎಂ ಡಿ.ಕೆ. ಶಿವಕುಮಾರ್‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು:...

ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ-ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯ ಎಸ್...

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ: ಡಿಸಿಎಂ ಡಿ.ಕೆ....

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬುಡಕಟ್ಟು ವಿಶ್ವವಿದ್ಯಾನಿಲಯ ಸ್ಥಾಪನೆ: ಪರಿಶೀಲಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬುಡಕಟ್ಟು...

ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ.

ಬೆಳಗಾವಿಯ ಗೃಹ ಕಚೇರಿಯಲ್ಲಿ ಇಂದು ಗ್ರಾಮೀಣ ಭಾಗದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ...
spot_img

Related Articles

Popular Categories

spot_img