Saturday, April 11, 2026
28.1 C
Belagavi

ಸಹಜವಾದ ಮಾನವೀಯತೆಯಿಂದ ಕೂಡಿರುವುದು ಜೈನ ಧರ್ಮ: ಬಸವರಾಜ ಬೊಮ್ಮಾಯಿ

advertisement

spot_img

ಜೈನ ಧರ್ಮವನ್ನು ಭಕ್ತಿ, ಪ್ರೀತಿಯಿಂದ ನೋಡದವರು ಮನುಷ್ಯರೇ ಅಲ್ಲ:ಬಸವರಾಜ ಬೊಮ್ಮಾಯಿ

ಸಹಜವಾದ ಮಾನವೀಯತೆಯಿಂದ ಕೂಡಿರುವುದು ಜೈನ ಧರ್ಮ: ಬಸವರಾಜ ಬೊಮ್ಮಾಯಿ

ಧಾರವಾಡ(ಕುಂದಗೋಳ): ಯಾರು ಜೈನ ಧರ್ಮವನ್ನು ಭಕ್ತಿಯಿಂದ, ಭಾವನಾತ್ಮವಾಗಿ ಪ್ರೀತಿಯಿಂದ ನೋಡುವುದಿಲ್ಲವೋ ಅವರು ಮನುಷ್ಯರೇ ಅಲ್ಲ. ಬಹಳ ಸಹಜವಾಗಿ ಎಲ್ಲ ಮಾನವೀಯತೆಯಿಂದ ಕೂಡಿರುವ ಮತ್ತು ಪ್ರತಿ ಹಂತದಲ್ಲೂ ಅದನ್ನು ಅನುಷ್ಠಾನಗೊಳಿಸುವ ಧರ್ಮ ಜೈನ ಧರ್ಮ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ ಏರ್ಪಡಿಸಿದ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯಾಗ ಸಮಾರಂಭದಲ್ಲಿ ಭಾಗವಹಿಸಿ, ಸಭಾಭವನ ಉದ್ಘಾಟಿಸಿ ಮಾತನಾಡಿದರು.

ಪರಮಪೂಜ್ಯ ಪುಣ್ಯ ಸಾಗರ ಮುನಿ ಮಹಾರಾಜರು ವಹಕ್ಕಿಯವಾಗಿ ಬಹಳ ದೊಡ್ಡ ಆಶೀರ್ವಾದ ಮಾಡಿದ್ದಾರೆ. ಅವರ ಜ್ಞಾನ ಬದುಕಿಗೆ ಬಹಳ ಹತ್ತಿರವಾಗಿದೆ. ಬದುಕನ್ನು ಹೇಗೆ ಸುಂದರವಾಗಿ ಶಾಂತವಾಗಿ ಶ್ರೀಮಂತರವಾಗಿ ನಡೆಸಬೇಕೆಂದು ಅವರು ಬರೆದಿರುವ ಮಹಾನ್ ಗ್ರಂಥ ಪುಣ್ಯಾಮೃತ . ಮನುಷ್ಯ ಯಾಕೆ ಹುಟ್ಟಿದ್ದಾನೆ. ಬದುಕಿನಲ್ಲಿಬರುವ ಸವಾಲುಗಳು ದ್ವಂದ್ವಗಳು, ಭಿನ್ನಾಭಿಪ್ರಾಯಗಳು ತಾಮಸ ಗುಣಗಳು ಅದನ್ನು ಹೇಗೆ ಬಗೆ ಹರಿಸಬೇಕು ಅದಕೆ ವಿಧಿ ವಿಧಾನವೇನು ಎನ್ನುವುದನ್ನು ಬಹಳ ಸರಳ ರೀತಿಯಲ್ಲಿ ಬರೆದಿದ್ದಾರೆ. ನಾವೆಲ್ಲರೂ ಅದನ್ನು ಓದಬೇಕು. ನಮಗೆ ಬದುಕಿನಲ್ಲಿ ಸರಿಯಾದ ದಿಕ್ಕೂಜಿ, ಆತ್ಮಸ್ಥೆರ್ಯ ಸಿಗುತ್ತದೆ ಎನ್ನುವ ಭಾವನೆ. ಇಂತಹ ಅನೇಕ ಗಂಥಗಳನ್ನು ಬರೆದಿರುವ ಅವರನ್ನು ಜ್ಞಾನ ಭಾಸ್ಕರ್ ಅಂಥ ಕರೆಯುತ್ತಾರೆ. ಅವರು ಸದಾ ಆಶೀರ್ವಾದ ಮಾರ್ಗದರ್ಶಣ ಮಾಡುತ್ತ ಬಂದಿದ್ದಾರೆ. ಅವರು ನೇರ ನುಡಿಯ ಸ್ವಾಮೀಜಿ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿರುವುದು ಸಂತೋಷ ಎಂದು ಹೇಳಿದರು.ಉತ್ತರ ಕರ್ನಾಟಕದ ಬಗ್ಗೆ ಅವರಿಗೆ ಬಹಳ ಪ್ರೀತಿ ಗುಡಿಗೇರಿ ಮೇಲೆ ಬಹಳಷ್ಟು ಪ್ರೀತಿ ಇಟ್ಟುಕೊಂಡಿರುವುದುರಿಂದ ಅವರು ಬಂದಿದ್ದಾರೆ. ಯಾರು ಜೈನ ಧರ್ಮವನ್ನು ಭಕ್ತಿಯಿಂದ ಭಾವನಾತ್ಮವಾಗಿ ಪ್ರೀತಿಯಿಂದ ನೋಡುವುದಿಲ್ಲವೋ ಅವರು ಮನುಷ್ಯರೇ ಅಲ್ಲ. ಬಹಳ ಸಹಜವಾಗಿ ಎಲ್ಲ ಮಾನವೀಯತೆಯಿಂದ ಕೂಡಿರುವ ಮತ್ತು ಪ್ರತಿ ಹಂತದಲ್ಲೂ ಅದನ್ನು ಅನುಷ್ಠಾನಗೊಳಿಸುವ ಧರ್ಮ ಜೈನ ಧರ್ಮ. ಮಹಾವೀರ ಆದಿಯಾಗಿ ಎಲ್ಲ ತೀರ್ಥಂಕರರು ತಮ್ಮ ಬದುಕಿನಲ್ಲಿ ತ್ಯಾಗ ಮಾಡಿ ತ್ಯಾಗವೇ ಈ ಧರ್ಮದ ಮೂಲ, ಅಹಿಂಸೆಯೇ ಪರಮ ಧರ್ಮ ಎನ್ನುವುದು ಜೈನ ಧರ್ಮ ಒಂದು ಕಿಮಿ ಕೀಟವನ್ನು ಹಿಂಸಿಸಬಾರದು ಎನ್ನುವುದು ಜೈನ ಧರ್ಮ ಅಹಿಂಸೆಯ ಜೊತೆಗೆ ತ್ಯಾಗ ಬಲಿದಾನ ಸಹಜವಾಗಿ ಈ ಧರ್ಮದಲ್ಲಿ ಆಗುತ್ತದೆ. ಈ ಧರ್ಮದಲ್ಲಿ ಉತ್ತರ ಭಾರತದಲ್ಲಿ ಬಹಳ ದೊಡ್ಡ ಶ್ರೀಮಂತರಿದ್ದಾರೆ. ದಕ್ಷಿಣ ಭಾರತದಲ್ಲಿ ರೈತರು ಮತ್ತು ಸಾಮಾನ್ಯ ವರ್ಗದ ಜನರಿದ್ದಾರೆ. ಆದರೆ ಪರೋಪಕಾರ ಎನ್ನುವ ಗುಣ ಇರುವುದರಿಂದ ಅವರು ಎಲ್ಲೆಲ್ಲಿ ಜೈನ ಧರ್ಮ ಇದೆ. ಅಲ್ಲಿ ಸಹಾಯ ಹಸ್ತ ಚಾಚುವ ಸ್ವಭಾವ ಇದೆ. ದಕ್ಷಿಣದವರು ಭಕ್ತಿಯ ಭಾವದಿಂದ ಉತ್ತರ ಭಾಗದಲ್ಲಿ ಸೇವೆ ಮಾಡಿದ್ದಾರೆ ಎಂದು ಹೇಳಿದರು.

ಹಿಂಸೆ ತಡೆಗೆ ಜೈನ ಧರ್ಮದಲ್ಲಿ ಉತ್ತರ
ಇವತ್ತಿನ ಜಗತ್ತಿನಲಿ ಎಲ್ಲಿ ನೋಡಿದಲ್ಲಿ ಹಿಂಸೆ ಇದೆ. ಯುದ್ಧ, ಭಯೋತ್ಪಾದನೆ ಇದೆ. ಇಂತಹ ಹಲವಾರು ಅಶಾಂತಿಯನ್ನು ಮೂಡಿಸುವಂತಹ ಸಂದರ್ಭದಲ್ಲಿ ಯಾವುದೇ ಸರ್ಕಾರ. ಯಾವುದೇ ಸೈನಿಕರು, ಯಾವುದೇ ಸಂಸ್ಥೆ ಇದನ್ನು ತಡೆಗಟ್ಟುವುದು ಬಹಳ ಕಷ್ಟ ಕೆಲವು ಧರ್ಮಾಚರಣೆಗಳಲ್ಲಿ ಹಿಂಸೆ ಇದೆ. ಧರ್ಮ ಯುದ್ಧ ಎಂದು ಕರೆಯುತ್ತಾರೆ. ಹಿಂದೆ ಧರ್ಮ ಯುದ್ಧಗಳು ಆಗಿವೆ. ಈಗ ಧರ್ಮ ಯುದ್ಧಗಳು ಆಗುವ ಅಗತ್ಯವಿಲ್ಲ.. ಕೆಲವರಿಗೆ ನೀವು ಧರ್ಮಕ್ಕಾಗಿ ಹಿಂಸೆ ಮಾಡಿದರೆ ಸ್ವರ್ಗ ಸಿಗುತ್ತದೆ ಎಂದು ಹೇಳುತ್ತಾರೆ. ಇದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದರೆ ಜೈನ ಧರ್ಮದ ತತ್ವದಲ್ಲಿ ಇದೆ. ಸರ್ವಸ್ವವನ್ನು ತ್ಯಾಗ ಮಾಡಿದಾಗ ಅಲ್ಲಿ ಶಾಂತಿ ಇದೆ. ಇಡಿ ಜಾಗೃತ ಆಗಬೇಕು. ಮನುಕುಲ ಜಾಗೃತ ಆಗಬೇಕು. ಮಹಾವೀರ, ಶಾಂತಿನಾಥ, ಪಾರ್ಶನಾಥ ಹೇಳಿದಂತ ವಿಚಾರಗಳನ್ನು ಇಡೀ ವಿಶ್ವದಲ್ಲಿ ಪ್ರಚಾರ ಮಾಡುವುದು ಅವಶ್ಯವಿದೆ ಎಂದರು.
ಭಗವಾನ ಮಹಾವೀರರು ತ್ಯಾಗಿಗಳು ಅವರು ರಾಜ ಮನೆತನದಲ್ಲಿ ಹುಟ್ಟಿದವರು. ಅವರು ಸನ್ಯಾಸತ್ವ ತೆಗೆದುಕೊಳ್ಳುವ ತೀರ್ಮಾನ ತೆಗೆದುಕೊಂಡಾಗ ತಮ್ಮ ಸರ್ವಸ್ವ ತ್ಯಾಗ ಮಾಡಲು ತೀರ್ಮಾನ ಮಾಡಿದರು. ಇಡೀ ರಾಜ್ಯದ ಜನ ಸಮೂಹವೇ ಸೇರಿತ್ತು. ಇಡೀ ರಾಜ್ಯದ ಬಂಗಾರ, ದವಸ ಧಾನ್ಯ ದಾನ ಮಾಡಿದರು. ಇವರು ಸನ್ಯಾಸತ್ವವನ್ನು ತೆಗೆದುಕೊಂಡರು. ಕೊಡೆಗೆ ತಮ್ಮ ಬಟ್ಟೆ ಬಿಚ್ಚಿ ಸನ್ಯಾಸತ್ವ ತೆಗೆದುಕೊಂಡರು. ಆಗ ಒಬ್ಬ ವ್ಯಕ್ತಿ ನೀವು ನನಗೆ ಏನಾದರೂ ಕೊಡಿ ಎಂದು ಕೇಳಿದಾ ಆಗ ಮಹಾವಿರರರು ತಾವು ತೊಟ್ಟ ಅರ್ಧ ಬಟ್ಟೆಯಲ್ಲಿಯೇ ಅರ್ಧ ಆತನಿಗೆ ನೀಡಿ, ಅರ್ಧ ಬಟ್ಟೆಯನ್ನೇ ತೊಟ್ಟು ಕಾಡಿನೊಳಗೆ ಹೋದರು, ಆಗ ಅದೂ ಕಾಡಿನ ಮುಳ್ಳಿಗೆ ಸಿಕ್ಕಾಗ ಅದನ್ನು ಬಿಟ್ಟು ದಿಗಂಬರರಾಗಿ ಹೋದರು ನಮ್ಮ ಊಹೆಗೂ ಮೀರಿದ ತ್ಯಾಗದ ಕಲನೆ ಮಾತುಗಳಲ್ಲಿ ಅಲ್ಲ, ಶಿಮಂತಿಕೆಯಿಂದ ಅಲ್ಲ, ನಮ್ಮನ್ನ ನಾವು ತ್ಯಾಗ ಮಾಡುವುದು. ಇಡೀ ಜಗತ್ತಿಗೆ ಇದು ಅದ್ಭುತ ವಿಚಾರ ಮತ್ತು ಆಚರಣೆ, ಇವತ್ತಿನ ಕಾಲಕ್ಕೆ ಇದು ಸಾಧ್ಯವಿಲ್ಲ. ಉತ್ತರ ಭಾರತದಲ್ಲಿ ದೊಡ್ಡ ದೊಡ್ಡ ಶ್ರೀಮಂತರು ಸರ್ವವನ್ನೂ ತೃಹಾಗೆ ಮಾಡಿ ಸನ್ಯಾಸಿಗಳಾಗುತ್ತಿದ್ದಾರೆ. ಅದರಲ್ಲೂ ಸಣ್ಣವರೂ ತ್ಯಾಗ ಮಾಡಿ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ. ಹೆಣ್ಣು ಮಕ್ಕಳೂ ತ್ಯಾಗ ಮಾಡಿ ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ. ಇದು ನಮ್ಮ ದೇಶದಲ್ಲಿದೆ ಎನ್ನುವುದು ಸಂತಸದ ವಿಷಯ. ಈ ಕಾರ್ಯಕ್ರಮಕ್ಕೆ ನಮ್ಮನ್ನು ಕರೆಯಿಸಿ ನಮ್ಮನ್ನು ಎಚ್ಚರಿಸುವ ಕೆಲಸ ಆಗುತ್ತಿದೆ. ತ್ಯಾಗ ಅಂದರೇನು, ಜೈನ ಧರ್ಮದ ತತ್ವ ಏನು ಎನ್ನುವುದನ್ನು ಕಲಿಸುತ್ತಿದೆ. ಇದು ನಮ್ಮ ಆತ್ಮ ಸಾಕ್ಷಿಯನ್ನು ಜಾಗೃತಿ ಮಾಡುವ ಕೆಲಸ ತಾವೆಲ್ಲ ಸೇರಿ ಮಾಡುತ್ತಿದ್ದಾರೆ. ಪರಮ ಪೂಜ್ಯರ ಸದಾ ಮಾಡುತ್ತ ಬಂದಿದ್ದಾರೆ. ನೀವೆಲ್ಲ ರಾಜ್ಯದ ಸೇವೆ ಮಾಡವ ಸೌಭಾಗ್ಯ ಕೊಟ್ಟಿದ್ದೀರಿ, ಅದರಲಿ ಇಂತಹ ಸಂಸ್ಥೆಗಳಿಗೆ ಸಹಾಯ ಮಾಡಿದರೆ ಮುಂದಿನ ಪೀಳಿಗೆಗೆ ಅದರ್ಶಗಳು ಉಳಿಯುತ್ತವೆ ಎನ್ನುವ ಕಾರಣಕ್ಕೆ ಈ ಸಂಸ್ಥೆಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ವಾತ್ಸಲ್ಯ ಮೂರ್ತಿ ಪರಮಪೂಜ್ಯ ಅಭಿಕ್ಷಣ ಜ್ಞಾನಭಾಸ್ಕರ ಪ.ಪೂ 108 ಆಚಾರ್ಯ ಶ್ರೀ ಪುಣ್ಯಸಾಗರಮುನಿ ಮಹಾರಾಜರು ಸಾನಿಧ್ಯ ವಹಿಸಿದ್ದರು. ಹಾಗೂ ಈ ಸಂಧರ್ಭದಲ್ಲಿ ವಾತ್ಸಲ್ಯ ಮೂರ್ತಿ ಪರಮಪೂಜ್ಯ ಅಭಿಕ್ಷಣ ಜ್ಞಾನಭಾಸ್ಕರ ಪ.ಪೂ 108 ಆಚಾರ್ಯ ಶ್ರೀ ಪುಣ್ಯಸಾಗರಮುನಿ ಮಹಾರಾಜರು ಸಾನಿಧ್ಯ ವಹಿಸಿದ್ದರು. ಹಾಗೂ ಮುಖಂಡರುಗಳಾದ ಶ್ರೀ ಮಾಣಿಕಚಂದ ಅಕ್ಕಿ, ಶ್ರೀ ದಯಾನಂದ ಕುಂದೂರ, ಶ್ರೀ ರಾಮಣ್ಣ ಮುರಗಿ, ಶ್ರೀ ಶಿವಾನಂದ ಬೆಂತೂರ, ಶ್ರೀ ದಯಾನಂದ ಪಾಟೀಲ್, ಶ್ರೀ ಬಾಹುಬಲಿ ಸೋಮಾಪುರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Hot this week

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು.

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು...

ರೈತರ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ಶಿಬಿರ

ರೈತರ ಜಾನುವಾರುಗಳಿಗೆ ಇಂದು ಉಚಿತವಾಗಿ ಆರೋಗ್ಯ ಶಿಬಿರವನ್ನ ನಡೆಸಲಾಯಿತು.ರಾಣಿ ಚೆನ್ನಮ್ಮಾ ವಿಶ್ವ...

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ! ಆಲಮಟ್ಟಿಯಿಂದ ನಗರಕ್ಕೆ...

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ* ಕೆಎಲ್ ಇ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ....

Topics

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು.

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು...

ರೈತರ ಜಾನುವಾರುಗಳಿಗೆ ಉಚಿತವಾಗಿ ಆರೋಗ್ಯ ಶಿಬಿರ

ರೈತರ ಜಾನುವಾರುಗಳಿಗೆ ಇಂದು ಉಚಿತವಾಗಿ ಆರೋಗ್ಯ ಶಿಬಿರವನ್ನ ನಡೆಸಲಾಯಿತು.ರಾಣಿ ಚೆನ್ನಮ್ಮಾ ವಿಶ್ವ...

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ!

ಬೇಸಿಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ವಿಜಯಪುರ ಜಿಲ್ಲಾಡಳಿತ ಸಿದ್ಧ! ಆಲಮಟ್ಟಿಯಿಂದ ನಗರಕ್ಕೆ...

ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ

*ಸ್ವಾತಂತ್ರ್ಯ ಹೋರಾಟಗಾರ ಅರಟಾಳ ರುದ್ರಗೌಡರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ:ಬಸವರಾಜ ಬೊಮ್ಮಾಯಿ* ಕೆಎಲ್ ಇ...

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

ಯುಡಿಎಫ್ ಮೈತ್ರಿಕೂಟದಿಂದ ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ: ಡಿಸಿಎಂ ಡಿ.ಕೆ....

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ

ದಾವಣಗೆರೆ ದಕ್ಷಿಣ ಉಪಚುನಾವಣಾ ಕಣ : ನಾಗರಸನಹಳ್ಳಿಯಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ದಾವಣಗೆರೆ...

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ: ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಭಾಗಕ್ಕೆ ಮಾಡಿರುವ ದ್ರೋಹ ಮತ್ಯಾವ ರಾಜಕಾರಣಿಯೂ ಮಾಡಿಲ್ಲ:...

ಹಳ್ಳಿ-ಹಳ್ಳಿಯಲ್ಲೂ ಕಾಂಗ್ರೆಸ್ ಅಲೆ, ಮನೆ-ಮನೆಯಲ್ಲೂ ಉಮೇಶ್ ಮೇಟಿ ಗೆಲುವಿನ ಕಹಳೆ

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ! ಹಳ್ಳಿ ಇರಲಿ,...
spot_img

Related Articles

Popular Categories

spot_img