Saturday, July 18, 2026
21.2 C
Belagavi

ಉಸಿರಾಟದ ಸಮಸ್ಯೆಯಿದ್ದರೂ ಕುಗ್ಗದ ಭಕ್ತಿ! ಆಕ್ಸಿಜನ್ ಸಿಲಿಂಡರ್ ಜೊತೆ ಚಿಂಚಲಿ ಮಾಯಕ್ಕನ ದರ್ಶನ ಪಡೆದ ದಂಪತಿ.

advertisement

spot_img

ಉಸಿರಾಟದ ಸಮಸ್ಯೆಯಿದ್ದರೂ ಕುಗ್ಗದ ಭಕ್ತಿ! ಆಕ್ಸಿಜನ್ ಸಿಲಿಂಡರ್ ಜೊತೆ ಚಿಂಚಲಿ ಮಾಯಕ್ಕನ ದರ್ಶನ ಪಡೆದ ದಂಪತಿ.

​ಆಂಕರ್ ದೈವ ಭಕ್ತಿ ಎನ್ನುವುದು ಎಂತಹ ಕಷ್ಟವನ್ನಾದರೂ ಮೆಟ್ಟಿ ನಿಲ್ಲುವ ಶಕ್ತಿ ನೀಡುತ್ತದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ. ಅನಾರೋಗ್ಯ, ಉಸಿರಾಟದ ಸಮಸ್ಯೆ ಇದ್ದರೂ ಲೆಕ್ಕಿಸದೆ, ಆಕ್ಸಿಜನ್ ಸಿಲಿಂಡರ್ ಅಳವಡಿಸಿಕೊಂಡೇ ದಂಪತಿಯೊಬ್ಬರು ಸುಪ್ರಸಿದ್ಧ ಚಿಂಚಲಿ ಮಾಯಕ್ಕ ದೇವಿಯ ದರ್ಶನ ಪಡೆದಿದ್ದಾರೆ. ಈ ಅಪರೂಪದ ಹಾಗೂ ಭಕ್ತಿಪರವಶದ ಕ್ಷಣಗಳಿಗೆ ಸಾಕ್ಷಿಯಾಯ್ತು ಚಿಂಚಲಿ ಕ್ಷೇತ್ರ.​ಅನಾರೋಗ್ಯ, ಉಸಿರಾಟದ ಸಮಸ್ಯೆ ಇದ್ದರೂ ಲೆಕ್ಕಿಸದೆ, ಆಕ್ಸಿಜನ್ ಸಿಲಿಂಡರ್ ಅಳವಡಿಸಿಕೊಂಡೇ ದಂಪತಿಯೊಬ್ಬರು ಗಡಿನಾಡು ಶಕ್ತಿ ದೇವತೆ ಬಂಡಾರ ಒಡತಿ ಚಿಂಚಲಿ ಮಾಯಕ್ಕ ದೇವಿಯ ದರ್ಶನ ಪಡೆದಿರುವ ಅಪರೂಪ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಐತಿಹಾಸಿಕ ಚಿಂಚಲಿ ಮಾಯಕ್ಕ ದೇವಿಯ ಸನ್ನಿಧಿಯಲ್ಲಿ ಇಂದು ಭಕ್ತಿಯ ಪರಾಕಾಷ್ಠೆಯೊಂದು ಕಂಡುಬಂತು. ಸಾಮಾನ್ಯವಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೇ ದೇವಸ್ಥಾನಕ್ಕೆ ಹೋಗಲು ಹಿಂದೇಟು ಹಾಕುವವರ ಮಧ್ಯೆ, ಮಹಾರಾಷ್ಟ್ರ ಪಂಡರಪುರ ಈ ದಂಪತಿಗಳ ಭಕ್ತಿ ಎಲ್ಲರ ಗಮನ ಸೆಳೆದಿದೆ. ​ತೀವ್ರವಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಪತಿಯು, ಮೂಗಿಗೆ ಆಕ್ಸಿಜನ್ ಪೈಪ್ ಅಳವಡಿಸಿಕೊಂಡು, ಒಂದು ಕೈಯಲ್ಲಿ ಆಕ್ಸಿಜನ್ ಸಿಲಿಂಡರ್ ಹಿಡಿದುಕೊಂಡೇ ದೇವಿಯ ಸನ್ನಿಧಿಗೆ ಆಗಮಿಸಿದ್ದರು. ಇವರಿಗೆ ಸಾಥ್ ನೀಡಿದ ಪತ್ನಿ, ಹೆಜ್ಜೆ ಹೆಜ್ಜೆಗೂ ಪತಿಯನ್ನು ಜಾಗರೂಕತೆಯಿಂದ ಕರೆತಂದು ಗಡಿನಾಡು ಶಕ್ತಿ ದೇವತೆ ಮಾಯಕ್ಕನ ದರ್ಶನ ಮಾಡಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಗೆ ದಂಪತಿ ಆಗಮಿಸಿ ದೇವರ ಮೇಲಿನ ನಂಬಿಕೆ ಇದ್ದರೆ ರೋಗ-ರುಜಿನಗಳು ಅಡ್ಡಿಯಾಗುವುದಿಲ್ಲ” ಎಂಬ ಮಾತನ್ನು ಈ ದಂಪತಿಗಳು ಅಕ್ಷರಶಃ ಪಾಲಿಸಿದ್ದಾರೆ. ಆಕ್ಸಿಜನ್ ಸಹಾಯವಿಲ್ಲದೆ ಉಸಿರಾಡಲು ಕಷ್ಟವಾಗುವ ಪರಿಸ್ಥಿತಿಯಲ್ಲೂ, ಮಾಯಕ್ಕನ ಮೇಲಿನ ಅಪಾರ ನಂಬಿಕೆಯಿಂದ ಅವರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಈ ದೃಶ್ಯವನ್ನು ಕಂಡ ಭಕ್ತರು ದಂಪತಿಗಳ ದೈವಭಕ್ತಿಗೆ ಕೈ ಮುಗಿದಿದ್ದಾರೆ.
ದೇವಿಯ ಉತ್ಸವ ಒಂದುವಾರ ಇರುವ ಮೊದಲೇ ಇವರಿಗೆ ಅನಾರೋಗ್ಯ ಕಾಡಿದೆ, ಕಳೆದ ಐದಾರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ವಾಡಿಕೆಯಂತೆ ಪ್ರತಿ ವರ್ಷ ದೇವಿಯ ದರ್ಶನ ಪಡೆಯುವುದು ಇವರ ಮನೆತನದ ಪರಂಪರೆಯಾಗಿದ್ರಿಂದ ಆರೋಗ್ಯವನ್ನು ಲೆಕ್ಕಿಸದೆ ದೇವಿಯ ದರ್ಶನವನ್ನು ಪಡೆದಿದ್ದೇವೆ ನಮಗೆ ದೇವಿಯ ದರ್ಶನ ಪಡೆದು ಊರಿಗೆ ಹಿಂದಿರುಗುತ್ತಿದ್ದೇವೆ, ವೈದರು ಕೂಡ ಯಾವುದೇ ಸಮಸ್ಯೆ ಇಲ್ಲ ಹೋಗಿ ಬನ್ನಿ ಅಂತ ಹೇಳಿದರು ಇದರಿಂದ ದೇವರಿಗೆ ಬಂದಿದ್ದೇವೆ ಎಂದು ಅನಾರೋಗ್ಯ ಮಹಿಳೆಯ ಪತಿ ಸ್ಥಳೀಯರಿಗೆ ವಿವರಿಸಿದ್ದರು

Hot this week

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಸಿಎಂ ಡಿ ಕೆ ಶಿವಕುಮಾರ್ ಮನವಿ

ಕರ್ನಾಟಕ ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿ ಮೋದಿ ಅವರಿಗೆ...

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು: ಸಿಎಂ ಡಿ ಕೆ ಶಿವಕುಮಾರ್

ರೈತರನ್ನು ಉಳಿಸಬೇಕು, ಕುಡಿಯುವ ನೀರು ಪೂರೈಸಬೇಕು, ಕೋರ್ಟ್ ಆದೇಶ ಪಾಲನೆಯೂ ಮಾಡಬೇಕು:...

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ...

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ ಅವಕಾಶ: ಸಿಎಂ ಡಿ ಕೆ ಶಿವಕುಮಾರ್

ತಿರುಮಲ ದೇಗುಲದ ನಿತ್ಯದ ಮೊದಲ ಆರತಿ ಪಡೆಯಲು ಕರ್ನಾಟಕದ ಜನಪ್ರತಿನಿಧಿಗಳು, ಗಣ್ಯರಿಗೆ...

Topics

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ ಶಿವಕುಮಾರ್

ಮಾಜಿ ಶಾಸಕ ಯಾಸಿನ್ ಅವರು ಪ್ರಗತಿಪರ ಕೆಲಸಗಾರರು: ಸಿಎಂ ಡಿ ಕೆ...

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ ಸಂಧಾನ

ಭಿನ್ನಾಭಿಪ್ರಾಯ ಮರೆತು ಒಂದಾದ 15 ದಂಪತಿಗಳು: ಕುಟುಂಬ ನ್ಯಾಯಾಲಯದ ಯಶಸ್ವಿ ರಾಜಿ...

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ

ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರದ ನಿರ್ಣಯ ಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ...
spot_img

Related Articles

Popular Categories

spot_img