ಬಡವರ ಅನ್ನಕ್ಕೆ ಕನ್ನ ಹಾಕಿದ ಭ್ರಷ್ಟ ಕಾಂಗ್ರೆಸ್ ಸರ್ಕಾರ! 657 ಕೋಟಿ ರೂ. ಎಲ್ಲಿ ಹೋಯಿತು?
ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ, ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಯಡಿ ಕಳೆದ 2025ರ ಜನವರಿ ತಿಂಗಳಲ್ಲಿ ಕೋಟ್ಯಂತರ ಫಲಾನುಭವಿಗಳಿಗೆ ಅಕ್ಕಿ ಮತ್ತು ಹಣ ಎರಡನ್ನೂ ನೀಡದೆ ವಂಚಿಸಿದ ಕುರಿತು ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ ಅವರಿಗೆ ಪ್ರಶ್ನೆ ಕೇಳಲಾಯಿತು.
2025ರ ಜನವರಿ ತಿಂಗಳಲ್ಲಿ ರಾಜ್ಯದ ಸುಮಾರು 1.27 ಕೋಟಿ ಪಡಿತರ ಚೀಟಿದಾರರಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿಯನ್ನೂ ವಿತರಿಸಿಲ್ಲ ಅಥವಾ ಅದರ ಬದಲಾಗಿ ನೀಡಬೇಕಿದ್ದ ಡಿಬಿಟಿ ಹಣವನ್ನೂ ಜಮೆ ಮಾಡಿಲ್ಲ. ಇದರಿಂದ ಬಡ ಜನರಿಗೆ ಸೇರಬೇಕಿದ್ದ ಸುಮಾರು 657 ಕೋಟಿ ರೂಪಾಯಿ ಹಣ ಎಲ್ಲಿ ಹೋಯಿತು?”
ಅಕ್ಕಿ ನೀಡಲು ಸಾಧ್ಯವಾಗದಿದ್ದರೆ ನೀವೇ ಮಾಡಿಕೊಂಡ ನಿಯಮದಂತೆ ಪ್ರತಿ ವ್ಯಕ್ತಿಗೆ 170 ರೂಪಾಯಿಯಂತೆ ಹಣವನ್ನಾದರೂ ನೀಡಬೇಕಿತ್ತು. ಹಣವನ್ನೂ ನೀಡದೆ, ಅಕ್ಕಿಯನ್ನೂ ಕೊಡದೆ ಬಡವರ ಹೊಟ್ಟೆ ಮೇಲೆ ಹೊಡೆದಿದ್ದೀರಿ. ಈ 657 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸದಲ್ಲೇ ಉಳಿದಿದೆಯೇ ಅಥವಾ ಬೇರೆಡೆ ವರ್ಗಾವಣೆಯಾಗಿದೆಯೇ?



