Tuesday, June 2, 2026
26.1 C
Belagavi

ಹಿಂದುಳಿದ ಮಕ್ಕಳಿಗೆ 3 ವರ್ಷಗಳಿಂದ ಸಿಗದ ವಿದ್ಯಾರ್ಥಿ ವೇತನ; ಸಿಎಂ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

advertisement

spot_img

ಹಿಂದುಳಿದ ಮಕ್ಕಳಿಗೆ 3 ವರ್ಷಗಳಿಂದ ಸಿಗದ ವಿದ್ಯಾರ್ಥಿ ವೇತನ; ಸಿಎಂ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಅಹಿಂದ ಹೆಸರಲ್ಲಿ ಕುರ್ಚಿ ಉಳಿಸಿಕೊಳ್ಳಲು ಹೊರಟ ಸಿಎಂ ಆ ಸಮುದಾಯಗಳ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ?

ಆರ್ಥಿಕ ಇಲಾಖೆ ಯಾರ ಕೈಯಲ್ಲಿದೆ? ಎಂದು ಆಕ್ರೋಶ

ಶಾಸಕಿ ಕೆರಮ್ಮ ನಾಯಕ ಅವರಿಗೆ ಬೆದರಿಕೆ; ಇದೇನಾ ಸರ್ಕಾರದ ನಡಳಿವಳಿಕೆ ಎಂದು ಟೀಕೆ

ಹಾಸನ ಸಮಾವೇಶದ ಸಿದ್ಧತೆ ಪರಿಶೀಲಿಸಿದ ಕೇಂದ್ರ ಸಚಿವರು

ಹಾಸನ: 21 ಜನವರಿ 2026

ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದ್ಯಾವ ಸೀಮೆ ಅಹಿಂದ ನಾಯಕರು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಹಾಸನದಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚುತ್ತಿರುವ ಆಂತರಿಕ ಕಚ್ಚಾಟ ಕಾರಣದಿಂದ ರಾಜ್ಯದ ಅಭಿವೃದ್ಧಿ ಸೊರಗುತ್ತಿದೆ. ಕುರ್ಚಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಸಿಎಂ ಕುರ್ಚಿ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ. ಆದರೆ, ಇಡೀ ದೇಶದಲ್ಲಿ ಇಂತಹ ಕೆಟ್ಟ ಸರ್ಕಾರ ಇನ್ನೊಂದಿಲ್ಲ ಎಂದು ಕಟುವಾಗಿ ಟೀಕಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಕುರ್ಚಿಯ ಕಲಹದಲ್ಲಿ ಐದು ಕಡೆ ಅಹಿಂದ ಸಮಾವೇಶ ನಡೆಸಲು ಹೊರಟಿದ್ದಾರೆ ಸಿಎಂ ಬೆಂಬಲಿಗರು. ಮುಖ್ಯಮಂತ್ರಿ ಮತ್ತು ಅಹಿಂದ ಸಂಘಟನೆಗಳಿಗೆ ಒಂದು ಪ್ರಶ್ನೆ ಕೇಳುತ್ತೇನೆ. 2023, 2024, 2025 ಈ ಮೂರು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 1,64,000 ಹಿಂದುಳಿದ ಮುತ್ತು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಕ್ಕಿಲ್ಲ. ಯಾಕೆ ಕೊಡಲಾಗಿಲ್ಲ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಅಹಿಂದ ಹೆಸರಿನಲ್ಲಿ ಸಿಎಂ ಕುರ್ಚಿ ಗಟ್ಟಿಗೊಳಿಸಿಕೊಳ್ಳಲು ಆ ಸಮುದಾಯಗಳನ್ನು ಉಪಯೋಗ ಮಾಡಿಕೊಂಡು ಬಂದಿದ್ದೀರಿ. ಕಳೆದ ಮೂರು ವರ್ಷದಿಂದ ಆ ಸಮುದಾಯದ ಮಕ್ಕಳಿಗೆ ಹಣ ಬಿಡುಗಡೆ ಮಾಡದೆ ವಂಚನೆ ಮಾಡಿದ್ದೀರಿ. ಆರ್ಥಿಕ ಇಲಾಖೆ ಲೋಪದೋಷದಿಂದ ಹಣ ಕೊಟ್ಟಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಆರ್ಥಿಕ ಇಲಾಖೆ ಯಾರ ಕೈಯಲ್ಲಿದೆ? ಈ ಸರ್ಕಾರ ಅಹಿಂದ ವರ್ಗದವರಿಗೆ ದ್ರೋಹ ಮಾಡುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ ಅವರಿಗೆ ಹಾಕಿರುವ ಪ್ರಕರಣದ ಖಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಇದು ಈ ಸರ್ಕಾರದ ಕೆಟ್ಟ ನಡವಳಿಕೆಗೆ ನಿದರ್ಶನವಾಗಿದೆ ಎಂದು ಟೀಕಿಸಿದರು.

ಶಾಸಕಿ ಬೆದರಿಕೆ; ಸರಕಾರಕ್ಕೆ ತರಾಟೆ

ಸರ್ಕಾರ ಯಾವ ಮಟ್ಟದಲ್ಲಿ ನಡೆಯುತ್ತಿದೆ? ಎನ್ನುವುದನ್ನು ಈ ಪ್ರಕರಣವೇ ಹೇಳುತ್ತದೆ. ಕರೆಯಮ್ಮ ಅವರದ್ದು ಒಬ್ಬರಎಲೆ ಅಷ್ಟೇ ಅಲ್ಲ, ಪ್ರತಿನಿತ್ಯ ಒಂದಲ್ಲ ಒಂದು ಬೆದರಿಕೆ, ಧಮ್ಕಿ.ಪ್ರಕಾರಗಳು ನಡೆಯುತ್ತಿವೆ. ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಧಮ್ಕಿ ಹಾಕಿದ ರಾಜೀವ್‌ಗೌಡ ಬಂಧನ ಆಗಿಲ್ಲ.ಇನ್ನೂ ಬಂಧಿಸುವುದರಲ್ಲೇ ಇದ್ದಾರೆ. ಗೃಹಸಚಿವರು ನಿನ್ನೆಯೂ ಹೇಳಿದ್ದಾರೆ, ಬಂಧಿಸಲು ಎಲ್ಲಾ ರೀತಿಯ ಪ್ರಯತ್ನ ಪಡುತ್ತಿದ್ದಾರೆ ಎಂದು. ಜಾಮೀನು ಅರ್ಜಿ ಬಗ್ಗೆ ಕೋರ್ಟ್ ಆದೇಶ ಏನು ಬರುತ್ತೆ ಎಂದು ನೋಡಿಕೊಂಡು ಬಂಧಿಸಬೇಕೋ ಅಥವಾ ಬೇಡವೋ ಎಂಬುದು ನಿರ್ಧಾರವಾಗುತ್ತದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಸಮಾವೇಶದ ಸಿದ್ಧತೆ ಪರಿಶೀಲಿಸಿದ ಸಚಿವರು:

ಈ ತಿಂಗಳ 24ರಂದು ನಡೆಯಲಿರುವ ಜೆಡಿಎಸ್ ಸಮಾವೇಶದ ಸಿದ್ಧತೆಗಳನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪರಿಶೀಲಿಸಿದರು.

ಮಾಜಿ ಮಂತ್ರಿ ಹೆಚ್.ಡಿ. ರೇವಣ್ಣ ಅವರೊಂದಿಗೆ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದ ಸಚಿವರು, ಅಲ್ಲಿ ನಡೆದಿರುವ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು; ಹಾಸನ ಜಿಲ್ಲೆ ಜನತಾದಳಕ್ಕೆ ಶಕ್ತಿಯನ್ನು ತುಂಬಿರುವ ತಂದೆ ತಾಯಂದಿರ

ನೆಲ. ಈ‌ ಜಿಲ್ಲೆ ನಮ್ಮ ಪಕ್ಷಕ್ಕೆ ಕರ್ಮಭೂಮಿ. ನಮಗೆ ಶಕ್ತಿ ಕೊಟ್ಟಿರುವ ಜಿಲ್ಲೆ ಇದು. ಈ ಜಿಲ್ಲೆಯ ಮೂಲಕ ಪಕ್ಷ ಸಂಘಟನೆಗೆ ಹೊಸದಾಗಿ ಚಾಲನೆ ನೀಡುತ್ತಿದ್ದೇವೆ. 2028ರ ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಈ ಪವಿತ್ರವಾದ ಪುಣ್ಯ ಭೂಮಿಯಿಂದ ಸಂಘಟನೆ ಮಾಡುತ್ತಿದ್ದೇವೆ. ವಿಶೇಷವಾಗಿ ಜನತಾದಳದ ಕುಟುಂಬದ ಸಂಘಟನೆಗೆ ಚಾಲನೆ ಕೊಟ್ಟು ಸಂದೇಶ ಕೊಡುವ ಕಾರ್ಯಕ್ರಮ ಇದಾಗಿದೆ ಎಂದರು.

ಜಿಬಿಎ ಚುನಾವಣೆಯಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಕೇಂದ್ರ ಸಚಿವರು; ನಮ್ಮ ಪಕ್ಷ ಇದುವರೆಗೂ ಇವಿಎಂ ಬಗ್ಗೆ ಚರ್ಚೆ ಮಾಡಿಲ್ಲ. ಬ್ಯಾಲೆಟ್ ಪೇಪರ್ ಬಗ್ಗೆನೂ ಚರ್ಚೆ ಮಾಡಿಲ್ಲ. ಚರ್ಚೆ ಮಾಡುತ್ತಿರುವವರು ಯೋಚನೆ ಮಾಡಬೇಕು, ಕಾಂಗ್ರೆಸ್‌ನವರು ಇವಿಎಂ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನಾನು ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಳುತ್ತೇನೆ. ನೀವು 135 ಸ್ಥಾನ ಗೆದ್ದರಲ್ಲಾ, ಇವಿಎಂ ಮೂಲಕ ಗೆದ್ದರಾ ಅಥವಾ ಬ್ಯಾಲೆಟ್ ಪೇಪರ್ ಬಳಸಿ ಗೆದ್ದರಾ? ಜನತೆಗೆ ಹೇಳಿ ಎಂದರು.

ಸಹಕಾರಿ ಸಂಸ್ಥೆಗಳ ಚುನಾವಣೆ ನಡೆದಿದೆ. ಈಗಿನ ಕಾಂಗ್ರೆಸ್ ಸರ್ಕಾರ ಆ ಚುನಾವಣೆಗಳಲ್ಲಿ ಬೆಳಗ್ಗೆ ಮತದಾನ ಮಾಡಲು ಹೋಗುವವರ ಪವರ್‌ನ್ನು ಹಿಂದಿನ ದಿನ ಮಧ್ಯರಾತ್ರಿ ಕಿತ್ತು ಹಾಕಿದೆ. ಉದಾಹರಣೆಗೆ ನಮ್ಮ ಪಕ್ಷದ ಶಾಸಕ ಬೋಜೇಗೌಡರೇ ಇದ್ದಾರೆ. ಇಂತಹ ಕೀಳುಮಟ್ಟದಲ್ಲಿ ಕಾನೂನುಬಾಹಿರ ಕೆಲಸ ಮಾಡಿ ಕೋ-ಆಪರೇಟಿವ್ ಸೊಸೈಟಿ ಗೆದ್ದಿದ್ದೇವೆ ಎನ್ನುತ್ತಾರೆ. ಹಾಸನ ಜಿಲ್ಲೆಯಲ್ಲಿ ರೇವಣ್ಣ ಬಿಗಿಯಾಗಿ ಇರುವುದರಿಂದ ಎಲ್ಲಾ ಉಳಿದುಕೊಂಡಿದೆ. ಬೇರೆ ಕಡೆ ಯಾವ ರೀತಿ ಚುನಾವಣೆ ನಡೆಸಿದ್ದಾರೆ ನೋಡಿದ್ದೇನೆ ಎಂದು ಅವರು ಹರಿಹಾಯ್ದರು.

ಮಾಜಿ ಮಂತ್ರಿಗಳು ಹಾಗೂ ಹೊಳೆನರಸೀಪುರ ಕ್ಷೇತ್ರದ ಶಾಸಕರಾದ ಹೆಚ್‌.ಡಿ. ರೇವಣ್ಣ, ವಿಧಾನ ಪರಿಷತ್‌ ಶಾಸಕಾಂಗ ಪಕ್ಷದ ನಾಯಕ ಎಸ್‌.ಎಲ್‌. ಭೋಜೇಗೌಡ, ಮಾಜಿ ಮಂತ್ರಿ ಹೆಚ್.ಕೆ. ಕುಮಾರಸ್ವಾಮಿ, ಶಾಸಕ ಸ್ವರೂಪ್‌ ಪ್ರಕಾಶ್‌, ಮಾಜಿ ಶಾಸಕ ಲಿಂಗೇಶ್ ಅವರು ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

Hot this week

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

Topics

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

ಮಾಜಿ ಸಚಿವ ಹೆಚ್. ವೆಂಕಟರಮಣ್ಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ ತಳಸಮುದಾಯದವರ ಬಗ್ಗೆ...

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕಾರ

ನೂತನ ಸಿಎಂ ಆಗಿ ಡಿ ಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ...

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ರಾಜ್ಯಸಭೆ ಅಭ್ಯರ್ಥಿಗಳ ಪಟ್ಟಿ ಒಟ್ಟಿಗೆ ಬಿಡುಗಡೆ: ಡಿ.ಕೆ. ಶಿವಕುಮಾರ್ ನವದೆಹಲಿ,  "ನನಗೆ...

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ

ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ: ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಯಾವುದೇ...

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ

ಯುವಕರಿಗೆ ಶಿಕ್ಷಣ, ಉದ್ಯೋಗ, ಅಧಿಕಾರ ನೀಡಿದರೆ ಉಜ್ವಲ ಭವಿಷ್ಯ ಬರೆಯುತ್ತಾರೆ:ಬಸವರಾಜ ಬೊಮ್ಮಾಯಿ ಸೋಲು,...

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ

ಬೆಂಗಳೂರು ನಗರದ ಮೊಳೆ ಮಾಫಿಯಾ ವಿರುದ್ಧ ಕ್ರಮಕ್ಕೆ ಆಯುಕ್ತರಿಗೆ ಪತ್ರ ಬೆಂಗಳೂರು: ಮೇ...

ನಾಯಕತ್ವ ಬದಲಾವಣೆ ಬೆನ್ನಲ್ಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬೆಳಗಾವಿ ಶಾಸಕರುಗಳು.

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ...

ಡಿ.ಕೆ. ಶಿವಕುಮಾರ್ ಅವರ ಪರಿಚಯ

ಡಿ.ಕೆ. ಶಿವಕುಮಾರ್ ಅವರ ಪರಿಚಯ ಕನಕಪುರ ತಾಲ್ಲೂಕು, ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ...
spot_img

Related Articles

Popular Categories

spot_img