Monday, August 10, 2026
20.5 C
Belagavi

ಆಕಸ್ಮಿವಾಗಿ ಬಾವಿಗೆ ಬಿದ್ದ 2 ವರ್ಷದ ಮಗು : ಪ್ರಾಣದ ಹಂಗುತೊರೆದು ಕಂದನನ್ನು ಕಾಪಾಡಿದ ಆಪದ್ಬಾಂಧವ

advertisement

spot_img

ಆಕಸ್ಮಿವಾಗಿ ಬಾವಿಗೆ ಬಿದ್ದ 2 ವರ್ಷದ ಮಗು : ಪ್ರಾಣದ ಹಂಗುತೊರೆದು ಕಂದನನ್ನು ಕಾಪಾಡಿದ ಆಪದ್ಬಾಂಧವ

ಶಿರಸಿ: ನಗರದ ಕಸ್ತೂರಬಾ ನಗರದಲ್ಲಿ ಸೋಮವಾರ ಮಧ್ಯಾಹ್ನ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಆಕಸ್ಮಿಕವಾಗಿ ಮನೆಯ ಹಿಂದಿದ್ದ ಆಳವಾದ ಬಾವಿಗೆ ಬಿದ್ದಿದ್ದು, ವ್ಯಕ್ತಿಯೋಬ್ಬರು ತನ್ನ ಪ್ರಾಣದ ಹಂಗುತೊರೆದು ಮಗುವನ್ನು ರಕ್ಷಿಸಿದ ಎದೆ ಝಲ್ಲೆನಿಸುವ ಘಟನೆ ನಡೆದಿದೆ.

ಯಮನ ಪಾಶದಿಂದ ಪಾರಾಗಿ ಬಂದ ಪುಟ್ಟ ಬಾಲಕಿಯನ್ನು ‘ಭುವಿ’ ಎಂದು ಗುರುತಿಸಲಾಗಿದ್ದು, ಆಕೆಗೆ ಮರುಜೀವ ನೀಡಿದ ಸಾಹಸಿಯನ್ನು ಸ್ಥಳೀಯ ಸಾರಿಕಾ ಟ್ರಸ್ಟ್‌ನ ಸಂಸ್ಥಾಪಕ ಪಯ್ಯು ಚೌಟಿ ಎಂದು ಗುರುತಿಸಲಾಗಿದೆ.

ಸೋಮವಾರ ಮಧ್ಯಾಹ್ನ ಮನೆಯ ಹೊರಗೆ ಆಟವಾಡುತ್ತಿದ್ದ ಭುವಿಗೆ ಊಟ ತರಲೆಂದು ಅಜ್ಜಿ ಒಳಗೆ ಹೋದ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿದೆ. ಅಜ್ಜಿ ಹೊರಬಂದು ನೋಡುವಷ್ಟರಲ್ಲಿ ಮಗು ನಾಪತ್ತೆಯಾಗಿದ್ದಳು. ಗಾಬರಿಯಿಂದ ಮನೆಯೊಳಗೆಲ್ಲಾ ಹುಡುಕಿದರೂ ಮಗು ಸಿಗಲಿಲ್ಲ. ಕೊನೆಗೆ ಅನುಮಾನಗೊಂಡು ಮನೆಯ ಹಿಂದಿನ ಬಾವಿಯ ಬಳಿ ಹೋಗಿ ಇಣುಕಿ ನೋಡಿದಾಗ, ಬಾವಿಯೊಳಗಿನಿಂದ ಮಗುವಿನ ಅಳುವಿನ ಶಬ್ದ ಕೇಳಿಸಿದೆ. ಪುಟ್ಟ ಭುವಿ ಬಾವಿಯಲ್ಲಿದ್ದ ನೀರಿನ ಪಂಪ್‌ನ ಪೈಪ್‌ ಅನ್ನು ಗಟ್ಟಿಯಾಗಿ ಹಿಡಿದುಕೊಂಡು, ನೀರಿನ ಮೇಲೆ ಒದ್ದಾಡುತ್ತಾ ಅಳುತ್ತಿದ್ದಳು.

ಅಜ್ಜಿಯ ಕೂಗಾಟ ಕೇಳಿ ತಕ್ಷಣವೇ ಅಕ್ಕಪಕ್ಕದವರು ಓಡಿಬಂದಿದ್ದಾರೆ. ಈ ಆತಂಕದ ಸುದ್ದಿ ಹತ್ತಿರದಲ್ಲೇ ವಾಸವಿದ್ದ ಪಯ್ಯು ಚೌಟಿ ಅವರಿಗೂ ತಲುಪಿದೆ. ಆಗಷ್ಟೇ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದ ಅವರು, ವಿಷಯ ತಿಳಿದ ಕೂಡಲೇ ಒಂದು ಕ್ಷಣವೂ ತಡಮಾಡದೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಆಳವಾದ ಬಾವಿಗಿಳಿದ ಅವರು, ಸರಿಸುಮಾರು ಅರ್ಧ ಗಂಟೆಯ ಸತತ ಕಾರ್ಯಾಚರಣೆಯ ನಂತರ ಮಗುವನ್ನು ಜೀವಂತವಾಗಿ ಹಾಗೂ ಸುರಕ್ಷಿತವಾಗಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಮಗು ಬಾವಿಗೆ ಬಿದ್ದ ಐದೇ ನಿಮಿಷದಲ್ಲಿ ಪತ್ತೆಯಾದರೂ, ಹಗ್ಗ ಮತ್ತು ಇತರೆ ವ್ಯವಸ್ಥೆ ಮಾಡಿ ಆಕೆಯನ್ನು ಮೇಲಕ್ಕೆ ತರಲು ಸಾಕಷ್ಟು ಸಮಯ ಹಿಡಿದಿತ್ತು ಎನ್ನಲಾಗಿದೆ.

ಅವರು ನಮ್ಮ ಪಾಲಿನ ಪುಣ್ಯಾತ್ಮ. ಸಾಕ್ಷಾತ್ ದೇವರಂತೆ ಬಂದು ನನ್ನ ಕಂದನನ್ನು ಉಳಿಸಿಕೊಟ್ಟರು.”

ಕಣ್ಣೀರಿಡುತ್ತಾ ಕೃತಜ್ಞತೆ ಸಲ್ಲಿಸಿದ ಮಗುವಿನ ಅಜ್ಜಿ

“ಆ ಕ್ಷಣದಲ್ಲಿ ಬಾವಿಗೆ ಯಾರೇ ಬಿದ್ದಿದ್ದರೂ ನಾನು ಇದನ್ನೇ ಮಾಡುತ್ತಿದ್ದೆ, ಮಗುವಿನ ಪ್ರಾಣ ಉಳಿದಿದ್ದೇ ನನಗೆ ದೊಡ್ಡ ಸಂತೋಷ.”

ಪಯ್ಯು ಚೌಟಿ, ಮಗುವನ್ನು ರಕ್ಷಿಸಿದ ಆಪದ್ಬಾಂಧವ

ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಬಾವಿಗಿಳಿದು ಕಂದಮ್ಮನ ಜೀವ ಉಳಿಸಿದ ಪಯ್ಯು ಚೌಟಿ ಅವರ ಕಾರ್ಯಕ್ಕೆ ನೆರೆದಿದ್ದ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಮುಕ್ತಕಂಠದ ಶ್ಲಾಘಿಸಿದ್ದಾರೆ.

Hot this week

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪರಿಶೀಲನೆ

ಮಳೆ ಕೊರತೆಯಿಂದ ಬೆಳೆ ಹಾನಿ: ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಸಚಿವ ಡಾ. ಯತೀಂದ್ರ...

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ. ಯತೀಂದ್ರ ಸಿದ್ದರಾಮಯ್ಯ

ಜನರ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಡಾ....

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್

ದೇಶದ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸಬೇಕು: ಬಿ.ಕೆ.ಹರಿಪ್ರಸಾದ್ ಬೆಂಗಳೂರು : ಕರ್ನಾಟಕ...

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ತರಬೇತಿ:...

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಸಾಮಾಜಿಕ ನ್ಯಾಯ,...

Topics

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ

ಪಿಎಚ್‌ಡಿ ಪದವಿ ಪಡೆದ ಜಹುರಬಾಶಾ ಕಲೆಗಾರರಿಗೆ ಅಭಿನಂದನೆ ರಾಮದುರ್ಗ: ಕಿತ್ತೂರು ರಾಣಿ ಚನ್ನಮ್ಮ...

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ ಬೊಮ್ಮಾಯಿ

ಹೊರಟ್ಟಿಯವರಿಂದ ರಾಜೀನಾಮೆ ಪಡೆದ ಸರ್ಕಾರದ ನಡೆ ಪರಿಷತ್ ಇಹಾಸದಲ್ಲಿ ಕಪ್ಪು ಚುಕ್ಕೆ:ಬಸವರಾಜ...

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ – 1,500 ಉದ್ಯೋಗ ಸೃಷ್ಟಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ₹500 ಕೋಟಿ ಹೂಡಿಕೆಗೆ ವೇಗ - 1,500 ಉದ್ಯೋಗ...
spot_img

Related Articles

Popular Categories

spot_img